ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಡೇವಿಡ್, ವಿಶಾಖಪಟ್ಟಣಂ ಜಿಲ್ಲೆಯ ಪಡೇರು ಪ್ರದೇಶದ ಅರಕು ಎಂಬಲ್ಲಿ 'ಗೋಲ್ಡನ್ ಮಹ್ಸೀರ್' ಎಂಬ ಅಪರೂಪದ ಮೀನನ್ನ ಗುರುತಿಸಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಡೇವಿಡ್, "ಈ ಮೀನನ್ನ ಗೋಲ್ಡನ್ ಮಹ್ಸೀರ್ ಎಂದು ಕರೆಯಲಾಗುತ್ತದೆ. ಇದು ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಇದೇ ಜಾತಿಯ ಸುಮಾರು 17 ವಿವಿಧ ರೀತಿಯ ಮೀನುಗಳು ಇವೆ. ಇದು ಹೆಚ್ಚಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆ ವಿಧಾನಗಳನ್ನು ಬಳಸಿಕೊಂಡು ಇವುಗಳನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಡುಗಳ ಒಳಗೆ ಇರುವ ಆಳವಾದ ಜಲಮೂಲಗಳನ್ನು ಪರಿಶೀಲಿಸಿದರೆ ಈ ಮೀನುಗಳು ಸಿಗುತ್ತವೆ. ಕಳೆದ ಐದು ವರ್ಷಗಳ ವರದಿಗಳ ಪ್ರಕಾರ, ಈ ರೀತಿಯ ಮೀನುಗಳು ಉತ್ತರ ಭಾರತದಲ್ಲಿ ಕಂಡು ಬಂದಿವೆ. ದಕ್ಷಿಣ ಭಾರತ ಅಥವಾ ಪೂರ್ವ ಘಟ್ಟಗಳಲ್ಲಿ ಕಂಡು ಬಂದಿಲ್ಲ. ಆಂಧ್ರ, ಒಡಿಶಾ, ಛತ್ತೀಸ್ಗಢ ಗಡಿಯ ಕಾಡುಗಳ ಆಳವಾದ ಜಲಮೂಲಗಳಲ್ಲಿ ಕಂಡು ಬರುತ್ತವೆ ಎಂದಿದ್ದಾರೆ.