ETV Bharat / bharat

ರೇಪ್​ ಕೇಸ್​ನಲ್ಲಿ ಹೇಳಿಕೆ ಬದಲಿಸಲು 15 ಲಕ್ಷಕ್ಕೆ ಬೇಡಿಕೆ: ಮೂವರು ಮಹಿಳೆಯರ ಬಂಧನ

ಅತ್ಯಾಚಾರದ ಪ್ರಕರಣದಲ್ಲಿ ತನ್ನ ಹೇಳಿಕೆ ಬದಲಿಸುವ ಸಲುವಾಗಿ ಮಹಿಳೆ ₹15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಅದರಲ್ಲಿ 6.5 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. ಇನ್ನುಳಿದ ಹಣ ಹಿಂಪಡೆಯಲು ಜೈಪುರದ ಹೋಟೆಲ್​ವೊಂದಕ್ಕೆ ಬಂದ ವೇಳೆ ತಾಯಿ-ಮಗಳು ಸೇರಿ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.

ಮಹಿಳೆಯರ ಬಂಧನ
author img

By

Published : Jul 29, 2019, 5:03 PM IST

ಜೈಪುರ: ಅತ್ಯಾಚಾರ ಪ್ರಕರಣ ಸಂಬಂಧ ತನ್ನ ಹೇಳಿಕೆ ಬದಲಾಯಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದ ತಾಯಿ-ಮಗಳು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರದ ಪ್ರಕರಣದಲ್ಲಿ ತನ್ನ ಹೇಳಿಕೆ ಬದಲಿಸುವ ಸಲುವಾಗಿ ಮಹಿಳೆ ₹15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಅದರಲ್ಲಿ 6.5 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. ಇನ್ನುಳಿದ ಹಣ ಹಿಂಪಡೆಯಲು ಜೈಪುರದ ಹೋಟೆಲ್​ವೊಂದಕ್ಕೆ ಬಂದ ವೇಳೆ ತಾಯಿ-ಮಗಳು ಸೇರಿ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.

43 ವರ್ಷದ ಮಹಿಳೆಯೊಬ್ಬರು ರಾಜೇಂದ್ರ ವ್ಯಾಸ ಮತ್ತು ಅನಿಲ್​ ಅಹುಜಾ ಎಂಬುವರ ವಿರುದ್ಧ ಜುಲೈ 16ರಂದು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಒಟ್ಟು ₹15 ಲಕ್ಷದಲ್ಲಿ ಈಗಾಗಲೇ ₹6.5 ಲಕ್ಷ ಹಣ ಪಡೆದಿದ್ದರು. ಇನ್ನು ₹8.5 ಲಕ್ಷ ಬಾಕಿ ಉಳಿದಿದ್ದ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆ, ಅವಳ ತಾಯಿ (67) ಮತ್ತೊಬ್ಬ ಮಹಿಳೆ ಜೊತೆ ಭಾನುವಾರ ಆರೋಪಿಗಳ ಬಳಿ ಬಂದಿದ್ದಾರೆ. ಈ ವೇಳೆ ಪೊಲೀಸರು ದಾಳಿ ಮಾಡಿ ಮೂವರೂ ಮಹಿಳೆಯರನ್ನು ಬಂದಿಸಿದ್ದಾರೆ. ಈ ವಿಚಾರವನ್ನು ಡಿಸಿಪಿ ರಾಹುಲ್ ಜೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವ್ಯಾಸ್ ಮತ್ತು ಅಹುಜಾ ಎರಡು ದಿನಗಳ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ದೆಹಲಿಯ ಮೂಲದ ಮಹಿಳೆ ಬ್ಲಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು ಎಂದು ವರದಿಯಾಗಿದೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.