ETV Bharat / bharat

ಜಮ್ಮು- ಕಾಶ್ಮೀರ ವಿದ್ಯುತ್ ಅಭಿವೃದ್ಧಿ ಇಲಾಖೆ ಮೇಲೆ ಸೈಬರ್​ ದಾಳಿ

author img

By

Published : Jun 26, 2020, 5:07 PM IST

ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ಅಭಿವೃದ್ಧಿ ಇಲಾಖೆಯು ರಾನ್ಸಮ್‌ವೇರ್ ವೈರಸ್​ ದಾಳಿಗೆ ಒಳಗಾಗಿದ್ದು, ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ransomware attack
ರಾನ್ಸಮ್‌ವೇರ್ ವೈರಸ್​ ದಾಳಿ

ಶ್ರೀನಗರ: ಕೊರೊನಾ ವೈರಸ್​ ಹರಡುತ್ತಿರುವ ಈ ಸಂದರ್ಭದಲ್ಲಿ ಸೈಬರ್​ ದಾಳಿಗಳೂ ಹೆಚ್ಚುತ್ತಿದ್ದು, ಇದೀಗ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಇಲಾಖೆಯೊಂದು ರಾನ್ಸಮ್‌ವೇರ್ ವೈರಸ್​ ದಾಳಿಗೆ ಒಳಗಾಗಿದೆ.

ಜಮ್ಮು- ಕಾಶ್ಮೀರದ ವಿದ್ಯುತ್ ಅಭಿವೃದ್ಧಿ ಇಲಾಖೆ (ಪಿಡಿಡಿ)ಯ ನಾಲ್ಕು ಡೇಟಾಬೇಸ್ ಸರ್ವರ್‌ಗಳ ಮೇಲೆ ರಾನ್ಸಮ್‌ವೇರ್ ವೈರಸ್​ ದಾಳಿ ನಡೆಸಿದ್ದು, ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈಟಿವಿ ಭಾರತದೊಂದಿಗೆ ವಿದ್ಯುತ್ ಅಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಮಾತು

ಈಟಿವಿ ಭಾರತದೊಂದಿಗೆ ಮಾತನಾಡಿದ ಇಲಾಖೆಯ ಮುಖ್ಯ ಇಂಜಿನಿಯರ್ ಅಜಾಜ್ ದಾರ್, ಬುಧವಾರ ಮುಂಜಾನೆ 4: 45ರ ವೇಳೆಗೆ ಶ್ರೀನಗರದಲ್ಲಿರುವ ಇಲಾಖೆಯ ದತ್ತಾಂಶ ಕೇಂದ್ರದಲ್ಲಿ ನಾಲ್ಕು ಡೇಟಾಬೇಸ್ ಸರ್ವರ್‌ಗಳು ರಾನ್ಸಮ್‌ವೇರ್ ವೈರಸ್ ದಾಳಿಗೆ ಒಳಗಾಗಿದ್ದು ತಿಳಿದು ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಗ್ರಾಹಕರ ಡೇಟಾ ಸುರಕ್ಷಿತವಾಗಿದೆ. ಈ ತಿಂಗಳ ಬಿಲ್ಲಿಂಗ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಗ್ರಾಹಕರ ಡೇಟಾ ಮೇಲೆ ಸೈಬರ್​ ದಾಳಿ ಪರಿಣಾಮ ಬೀರುವುದಿಲ್ಲ. ಆದರೆ ಆನ್‌ಲೈನ್ ಪಾವತಿಗಳು ಸದ್ಯಕ್ಕೆ ಸಾಧ್ಯವಿಲ್ಲ. ಗ್ರಾಹಕರು ಬ್ಯಾಂಕುಗಳಲ್ಲಿ ಆಫ್‌ಲೈನ್ ಮೋಡ್ ಮೂಲಕ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ ಎಂದು ಅಜಾಜ್ ದಾರ್ ತಿಳಿಸಿದ್ದಾರೆ.

ಇದು ರಾನ್ಸಮ್‌ವೇರ್ ದಾಳಿಯಾಗಿದ್ದು, ಹೆಚ್ಚಾಗಿ ಆನ್‌ಲೈನ್ ವಂಚನೆಗಳಿಗಾಗಿ ಮಾಡಲಾಗುತ್ತದೆ. ಚೀನಾದ ಹ್ಯಾಕರ್​​ಗಳ ಕೃತ್ಯ ಇದಾಗಿದೆಯಾ ಎಂಬುದರ ಕುರಿತು ಮಾಹಿತಿಯಿಲ್ಲ. ಆದರೆ ಇದರ ಉದ್ದೇಶ ಮಾತ್ರ ಒಳ್ಳೆಯದ್ದಲ್ಲ. ಇ-ಮೇಲ್ ಬಳಸಿ ಪ್ರಮುಖ ಮಾಹಿತಿಯನ್ನು ಹ್ಯಾಕರ್ ಪಡೆದುಕೊಳ್ಳುತ್ತಾನೆ ಎಂದು ಸೈಬರ್ ಸೆಲ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ನಡೆದ ಗಡಿ ಸಂಘರ್ಷದ ಬಳಿಕ ಭಾರತ ವಿವಿಧ ಕ್ಷೇತ್ರಗಳ ಮೇಲೆ ಸೈಬರ್​ ದಾಳಿ ನಡೆಸಲು ಮುಂದಾಗಿದ್ದು, 40,000 ಕ್ಕೂ ಹೆಚ್ಚು ದಾಳಿ ನಡೆಸಲು ಚೀನಾ ಯತ್ನಿಸಿದೆ ಎಂದು ಮಹಾರಾಷ್ಟ್ರದ ಸೈಬರ್​ ಸೆಲ್​​ನ ಪೊಲೀಸ್​ ಅಧಿಕಾರಿ ಈ ಹಿಂದೆ ಎಚ್ಚರಿಕೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.