ಮುಂಬೈ : ಐಟಂ ಸಾಂಗ್ ಅಂದ್ರೇ ಸಾಕು ಫಸ್ಟ್ ನೆನಪಿಗೆ ಬರೋದು ರಾಖಿ ಸಾವಂತ. ಸದಾ ಒಂದಲ್ಲ ಒಂದು ಅವಾಂತರ ಸೃಷ್ಟಿಸಿ ಸುದ್ದಿಯಲ್ಲಿರೋ ರಾಖಿ ಸಾವಂತ್, ಸದ್ಯ ಬಿಗ್‌ಬಿ ಮತ್ತು ಶತ್ರುಘ್ನ ಸಿನ್ಹಾ ಜೊತೆ 'ಚಪ್ಪನ್ ಚೂರಿ' ಅಂತಾ ಹಾಟ್ ಆಗಿ ತೆರೆ ಮೇಲೆ ಬರೋಕೆ ರೆಡಿಯಾಗಿದ್ದಾಳೆ.
ಇತ್ತೀಚೆಗೆ ಪಾಕ್ ಬಾವುಟವನ್ನು ದೇಹದ ಮೇಲೆ ಹಾಕಿಕೊಂಡು ವಿವಾದ ಸೃಷ್ಟಿಸಿಕೊಂಡಿದ್ದ ರಾಖಿ, ಸದ್ಯ ಅಂತಹದೇ ಮತ್ತೊಂದು ಪ್ರಯೋಗಕ್ಕೆ ಕೈ ಹಾಕಿದ್ದು, ತನ್ನ ಹೊಸ ಅಲ್ಬಂ ಐಟಂ ಸಾಂಗ್‌ನಲ್ಲಿ ಡ್ಯೂಪ್ಲಿಕೇಟ್ ಅಮಿತಾ ಬಚ್ಚನ್ ಮತ್ತು ಶತ್ರುಘ್ನ ಸಿನ್ಹಾರನ್ನ ಸ್ಕ್ರೀನ್ ಮೇಲೆ ತರಲು ಮುಂದಾಗಿದ್ದಾಳೆ. ರಾಖಿ ಗೆಳತಿ ಮಂದಾಕಿನಿ ಈ ಹಾಡನ್ನು ಹಾಡಿದ್ದಾಳಂತೆ.
ಮಾಧ್ಯಮದವರೊಂದಿಗೆ ಮಾತಿಗಿಳಿದ ರಾಖಿ, ನನ್ನ ಸಾಂಗ್‌ನಲ್ಲಿ ಬಿಗ್‌ಬಿ ಮತ್ತು ಶತ್ರುಘ್ನ ಆ್ಯಕ್ಟ್ ಮಾಡ್ಬೇಕಿತ್ತು. ಆದರೆ, ಅವರು ಫ್ಲೈಟ್ ಮಿಸ್ ಮಾಡ್ಕೊಂಡಿದಾರೆ. ಯಾಕಂದ್ರೆ, ಅವರಿಗೆ ಲೂಸ್ ಮೋಷನ್, ಅದಕ್ಕೆ ಡ್ಯೂಪ್ ಬಳಸಿಕೊಂಡಿದೀನಿ ಅಂತಾ ದಿಗ್ಗಜರ ಕಾಲೆಳೆದಿದ್ದಾಳೆ.
ಸದಾ ಬೋಲ್ಡ್ ಸ್ಟೇಟ್‌ಮೆಂಟ್ ನೀಡೋದರಲ್ಲಿ ಹೆಸರುವಾಸಿಯಾಗಿರೋ ರಾಖಿ ಸಾವಂತ್, ನನ್ನ ಐಟಂ ಡ್ಯಾನ್ಸ್‌ಗೆ 'ಬೆಸ್ಟ್ ಐಟಂ ಡ್ಯಾನ್ಸರ್' ಅಂತಾ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ಕೊಡ್ತಾರೆ ಎಂದು ಹೇಳಿದ್ದಾಳೆ.
- " class="align-text-top noRightClick twitterSection" data="">