ETV Bharat / bharat

'ಒಂದಿಂಚು ಭೂಮಿಯನ್ನು ಆಕ್ರಮಿಸಲು ಬಿಡಲ್ಲ': ರಾಜನಾಥ್ ಸಿಂಗ್ - ಡಾರ್ಜಿಲಿಂಗ್‌ನಲ್ಲಿ ಶಸ್ತ್ರ ಪೂಜೆ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದ ಶಸ್ತ್ರಾಸ್ತ್ರ ಪೂಜೆಯಲ್ಲಿ ಭಾಗವಹಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಕ್ಕೀಂನ ನಾಥುಲಾ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಮಾತನಾಡಿದ ಅವರು, ಭಾರತದ ಒಂದಿಂಚು ಭೂಮಿಯನ್ನು ಸಹ ಆಕ್ರಮಿಸಲು ನೆರೆಯ ರಾಷ್ಟ್ರಗಳಿಗೆ ಅವಕಾಶ ನೀಡಲ್ಲವೆಂದು ಎಚ್ಚರಿಕೆ ರವಾನಿಸಿದ್ದಾರೆ.

Rajnath Singh performs Shastra puja
ಶಸ್ತ್ರ ಪೂಜೆ ನೆರವೇರಿಸಿದ ರಾಜನಾಥ್ ಸಿಂಗ್
author img

By

Published : Oct 25, 2020, 2:00 PM IST

ನವದೆಹಲಿ: ದಸರಾ ಹಬ್ಬದ ಪ್ರಯುಕ್ತ ಡಾರ್ಜಿಲಿಂಗ್​ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕದ ಬಳಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶಸ್ತ್ರಾಸ್ತ್ರ ಪೂಜೆ ನೆರವೇರಿಸಿದ್ದಾರೆ.

ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಭಾರತ-ಚೀನಾ ಗಡಿ ಉದ್ವಿಗ್ನತೆ ಕೊನೆಗೊಳ್ಳಬೇಕು ಮತ್ತು ಶಾಂತಿಯನ್ನು ಕಾಪಾಡಬೇಕು ಎಂದು ಭಾರತ ಬಯಸಿದೆ. ಅಲ್ಲದೆ, ಭಾರತದ ಒಂದೇ ಒಂದು ಇಂಚು ಭೂಮಿಯನ್ನೂ ಆಕ್ರಮಿಸಲು ನಮ್ಮ ಸೈನ್ಯವು ಬಿಡುವುದಿಲ್ಲ" ಎಂದಿದ್ದಾರೆ.

ಶಸ್ತ್ರಾಸ್ತ್ರ ಪೂಜೆ ನೆರವೇರಿಸಿದ ರಾಜನಾಥ್ ಸಿಂಗ್

ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಅವಧಿಯನ್ನು ಒಳಗೊಂಡಂತೆ ರಾಜನಾಥ್ ಸಿಂಗ್ ಕಳೆದ ಹಲವಾರು ವರ್ಷಗಳಿಂದ ದಸರಾ ಸಮಯದಲ್ಲಿ ಶಸ್ತ್ರಾಸ್ತ್ರ ಪೂಜೆ ನೆರವೇರಿಸುತ್ತ ಬಂದಿದ್ದಾರೆ.

  • सभी देशवासियों को विजयदशमी पर्व की हार्दिक शुभकामनाएँ।

    आज के इस पावन अवसर पर मैं सिक्किम के नाथूला क्षेत्र में जाकर भारतीय सेना के जवानों से भेंट करूँगा एवं शस्त्र पूजन समारोह में भी मौजूद रहूँगा।

    — Rajnath Singh (@rajnathsingh) October 25, 2020 " class="align-text-top noRightClick twitterSection" data=" ">

"ವಿಜಯದಶಮಿ ಹಬ್ಬದಂದು ದೇಶದ ಎಲ್ಲಾ ಜನರಿಗೆ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಇಂದು ನಾನು ಸಿಕ್ಕೀಂನ ನಾಥುಲಾ ಪ್ರದೇಶಕ್ಕೆ ಭೇಟಿ ನೀಡುತ್ತೇನೆ ಮತ್ತು ಭಾರತೀಯ ಸೈನಿಕರನ್ನು ಭೇಟಿಯಾಗಿ, ಶಸ್ತ್ರಾಸ್ತ್ರ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ" ಎಂದು ಟ್ವೀಟ್ ಮಾಡಿ ತಿಳಿಸಿದ್ದರು.

ಯೋಧರ ಜೊತೆ ದಸರಾ ಹಬ್ಬ ಆಚರಣೆ ಹಾಗೂ ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನಾ ಸನ್ನದ್ಧತೆಯ ಬಗ್ಗೆ ಪರಿಶೀಲನೆ ನಡೆಸಲು ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಹಾಗೂ ಸಿಕ್ಕೀಂ ಭೇಟಿ ಹಮ್ಮಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.