ನವದೆಹಲಿ : ನೂತನ ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ರಾಜೀವ್‌ಕುಮಾರ್ ಇಂದು ಅಧಿಕಾರ ಸ್ವೀಕರಿದ್ದಾರೆ. ಅಶೋಕ್ ಲವಾಸಾ ಅವರ ರಾಜೀನಾಮೆ ಬಳಿಕ ಆಗಸ್ಟ್ 21ರಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ರಾಜೀವ್‌ಕುಮಾರ್ ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದ್ದರು.
ಇಂದು ಅಧಿಕಾರ ಸ್ವೀಕರಿಸುವ ಮೂಲಕ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮತ್ತು ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರೊಂದಿಗೆ ರಾಜೀವ್ ಕುಮಾರ್ ಭಾರತದ ಚುನಾವಣಾ ಆಯೋಗದಲ್ಲಿ ಸೇವೆ ಸಲ್ಲಿಸಲಿದ್ದಾರೆ. 2024ನೇ ಸಾಲಿನ ಲೋಕಸಭಾ ಚುನಾವಣೆ ಇವರ ಅವಧಿಯಲ್ಲೇ ನಡೆಯಲಿದೆ.
ರಾಜೀವ್‌ಕುಮಾರ್, ಜಾರ್ಖಂಡ್ ಕೇಡರ್ನ 1984ರ ಬ್ಯಾಚ್ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ.