ETV Bharat / bharat

ಮೋದಿ ಸರ್ಕಾರದ ವೈಫಲ್ಯದಿಂದ ದೆಹಲಿಯಲ್ಲಿ ದಂಗೆ: ರಜಿನಿಕಾಂತ್ ಕಿಡಿ ಕಿಡಿ

ಕೇಂದ್ರ ಮತ್ತು ದೆಹಲಿ ರಾಜ್ಯ ಸರ್ಕಾರಗಳು ಪ್ರತಿಭಟನೆಯನ್ನು ನಿಗ್ರಹಿಸಬೇಕಿತ್ತು. ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ನಟ ರಜಿನಿಕಾಂತ್​ ಚೆನ್ನೈನ ತಮ್ಮ ಪೋಯಸ್​ ಗಾರ್ಡನ್​ ನಿವಾಸದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

Rajinikanth
ರಜಿನಿಕಾಂತ್
author img

By

Published : Feb 26, 2020, 8:37 PM IST

ಚೆನ್ನೈ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಎಎ ವಿರೋಧಿ ಹಾಗೂ ಪರರ ನಡುವೆ ನಡೆದ ಘರ್ಷಣೆಯಿಂದಾಗಿ 24 ಜನರು ಮೃತಪಟ್ಟು ನೂರಾರು ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ನಟ ರಜಿನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಮತ್ತು ದೆಹಲಿ ರಾಜ್ಯ ಸರ್ಕಾರಗಳು ಪ್ರತಿಭಟನೆಯನ್ನು ನಿಗ್ರಹಿಸಬೇಕಿತ್ತು. ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಚೆನ್ನೈನ ತಮ್ಮ ಪೋಯಸ್​ ಗಾರ್ಡನ್​ ನಿವಾಸದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಈ ಘಟನೆಯು ಕೇಂದ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಸಿಎಎಯಿಂದ ಯಾವುದೇ ರಾಜ್ಯದ ಮುಸ್ಲಿಮರಿಗೆ ತೊಂದರೆಯಾದರೇ ಅದರ ವಿರುದ್ಧ ಮೊದಲು ನಾನೇ ಧ್ವನಿ ಎತ್ತುತ್ತೇನೆ ಎಂದು ಅಭಯ ನೀಡಿದರು.

ಚೆನ್ನೈನ ಪೋಯಸ್​ ಗಾರ್ಡನ್​ ನಿವಾಸದಲ್ಲಿ ಮಾತನಾಡಿದ ನಟ ರಜಿನಿಕಾಂತ್

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಪರ ಮತ್ತು ವಿರೋಧದ ಹಿಂಸಾಚಾರ ಮತ್ತು ಗಲಭೆಯಿಂದ ಮೃತಪಟ್ಟವರ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಪ್ರಚೋದನಾಕಾರಿ ಭಾಷಣ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿ, ದ್ವೇಷದ ಭಾಷಣ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.