ನವದೆಹಲಿ: ಅನಾರೋಗ್ಯ ಕಾರಣ ನೀಡಿ ಬಾಬ್ರಿ ಮಸೀದಿ ಪ್ರಕರಣದಿಂದ ತಮ್ಮನ್ನು ತೆಗೆದು ಹಾಕಿರುವ ಬಗ್ಗೆ ಹಿರಿಯ ವಕೀಲ ರಾಜೀವ್ ಧವನ್ ಫೇಸ್ಬುಕ್ನಲ್ಲಿ ಕಿಡಿಕಾರಿದ್ದಾರೆ.
ತಮ್ಮನ್ನು ಕೇಸ್ನಿಂದ ದೂರ ಮಾಡಲು ಅನಾರೋಗ್ಯ ಕಾರಣ ನೀಡಲಾಗಿದೆ ಎಂದಿರುವ ರಾಜೀವ್ ಧವನ್, ಅದು ಸಮರ್ಪಕ ಕಾರಣವಲ್ಲ ಅಸಂಬದ್ಧ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="">
ಬಾಬ್ರಿ ಮಸೀದಿ ಪ್ರಕರಣ ಅಥವಾ ಪುನರ್ ಪರಿಶೀಲನೆಯ ಯಾವುದೇ ವಿಚಾರದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ಗೆ ತಿಳಿಸಿದ್ದೇನೆ ಎಂದು ರಾಜೀವ್ ಧವನ್ ಹೇಳಿದ್ದಾರೆ.
ರಾಜೀವ್ ಧವನ್, ಸುನ್ನಿ ವಕ್ಫ್ ಬೋರ್ಡ್ ಸೇರಿದಂತೆ ಹಲವು ಮುಸ್ಲಿಂ ಸಂಘಟನೆ ಪರ ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದರು.