ಪಾಲಿ (ಗುಜರಾತ್): ರಾಷ್ಟ್ರವ್ಯಾಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಮಂಗಳಮುಖಿಯರು ತಮ್ಮ 23 ಬಾಡಿಗೆದಾರರ ಬಾಡಿಗೆ ಮನ್ನಾ ಮಾಡಿದ್ದಾರೆ.
ನಗರದಲ್ಲಿ ಸುಮಾರು 12 ಮನೆಗಳು ಮತ್ತು 11 ಅಂಗಡಿಗಳನ್ನು ಹೊಂದಿರುವ ಮಂಗಳಮುಖಿಯರು ಮುಂದಿನ ಎರಡು ತಿಂಗಳವರೆಗೆ ಬಾಡಿಗೆ ಪಾವತಿಸದಂತೆ ತಮ್ಮ ಬಾಡಿಗೆದಾರರಿಗೆ ತಿಳಿಸಿದ್ದಾರೆ.
"ದುರ್ಬಲರಾಗಿರುವವರು ಮತ್ತು ದೈನಂದಿನ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುಟುಂಬಗಳಿಗೆ ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡಲು ಈ ಕ್ರಮ ಕೈಗೊಂಡಿದ್ದೇವೆ" ಎಂದು ಮಂಗಳಮುಖಿಯರ ಸಮುದಾಯದ ಮುಖ್ಯಸ್ಥೆ ಆಶಾ ಹೇಳಿದರು.
"ದೇಶದ ಪ್ರತಿಯೊಬ್ಬ ನಾಗರಿಕರು ಮನೆಯೊಳಗೆ ಇರಬೇಕೆಂದು ನಾನು ಮನವಿ ಮಾಡುತ್ತೇನೆ. ಕೊರೊನಾ ವೈರಸ್ ವಿರುದ್ಧದ ಈ ಯುದ್ಧದಲ್ಲಿ ನಾವು ಗೆಲ್ಲಬೇಕು" ಎಂದು ಆಶಾ ಹೇಳಿದರು.
ಇದರ ಜೊತೆಗೆ, ಕಳೆದ 15 ದಿನಗಳಿಂದ ಮನೆಯಲ್ಲಿಯೇ ಆಹಾರ ತಯಾರಿಸಿ, ಆಹಾರ ಪ್ಯಾಕೆಟ್ಗಳನ್ನು ಈ ಪ್ರದೇಶದ ಬಡ ಜನರಿಗೆ ತಲುಪಿಸುವ ಕೆಲಸವನ್ನು ಮಂಗಳಮುಖಿಯರು ಮಾಡುತ್ತದ್ದಾರೆ. 150ಕ್ಕೂ ಹೆಚ್ಚು ಜನರ ಇವರ ತಂಡ ಬಡವರಿಗೆ ಅಕ್ಕಿ, ಹಿಟ್ಟು, ಎಣ್ಣೆ, ಚಹಾ ಎಲೆಗಳು, ಸಕ್ಕರೆ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಒದಗಿಸಿತ್ತು.