ಜೋಧಪುರ(ರಾಜಸ್ಥಾನ): ಗಂಡನ ಕೊಲೆ ಮಾಡಿ, ಸಿಮೆಂಟ್ ಫ್ಯಾಕ್ಟರಿಯಲ್ಲಿ ಆತನ ಮೃತದೇಹ ಬಚ್ಚಿಟ್ಟಿರುವ ಮಹಿಳೆ, ಕಾಣೆಯಾಗಿದ್ದಾನೆಂದು ನಾಟಕವಾಡಿ ಕೊನೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ರಾಜಸ್ಥಾನದ ಜೋಧಪುರ್ದಲ್ಲಿ ಈ ಘಟನೆ ನಡೆದಿದ್ದು, ಪತಿಯ ಕೊಲೆ ಮಾಡಿ, ಆತನ ದೇಹ ತುಂಡು ತುಂಡಾಗಿ ಕತ್ತರಿಸಿರುವ ಹೆಂಡತಿ ಅವುಗಳನ್ನ ಸಿಮೆಂಟ್ ಫ್ಯಾಕ್ಟರಿಯಲ್ಲಿ ಬಚ್ಚಿಟ್ಟಿದ್ದಾಳೆ. ಇದಾದ ಬಳಿಕ ಆತ ಕಾಣೆಯಾಗಿದ್ದಾನೆಂದು ನಾಟಕವಾಡಿದ್ದಾಳೆ.
ಕಳೆದ ಏಳು ವರ್ಷಗಳ ಹಿಂದೆ ಸಿಂಗ್ ಮತ್ತು ಸೀಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಇಬ್ಬರ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಜುಲೈ 11ರ ರಾತ್ರಿ ಸೀಮಾ ಹಾಗೂ ಆಕೆಯ ಸೋದರಿ, ಗಂಡನನ್ನ ಬನಾಡ್ ಪ್ರದೇಶದಲ್ಲಿನ ಖಾಲಿ ಫ್ಲ್ಯಾಟ್ಗೆ ಕರೆದಿದ್ದಾರೆ. ಅಲ್ಲಿ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ನೀಡಿದ್ದಾರೆ. ಆತ ಪ್ರಜ್ಞೆ ತಪ್ಪುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಆತನ ದೇಹ ತುಂಡು ತುಂಡಾಗಿ ಕತ್ತರಿಸಿದ್ದಾರೆ. ತದನಂತರ ಪಕ್ಕದ ಸಿಮೆಂಟ್ ಕಾರ್ಖಾನೆಯಲ್ಲಿ ಮೃತದೇಹ ಬಚ್ಚಿಟ್ಟಿದ್ದಾರೆ.
ತಿಂಗಳ ನಂತರ ಕಾಣೆಯಾಗಿರುವ ಪ್ರಕರಣ ದಾಖಲಾಗುತ್ತಿದ್ದಂತೆ ಹೆಂಡತಿ ವಿಚಾರಣೆಗೊಳಪಡಿಸಿದಾಗ ನಿಜ ಒಪ್ಪಿಕೊಂಡಿದ್ದಾಳೆ. ಜತೆಗೆ ಮೃತದೇಹ ಬಚ್ಚಿಟ್ಟಿರುವ ಜಾಗ ತೋರಿಸಿದ್ದಾಳೆ. ಇದೀಗ ಕೃತ್ಯದಲ್ಲಿ ಭಾಗಿಯಾಗಿರುವ ಮೂವರ ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.