ETV Bharat / bharat

ಆಕಾಶಕಾಯವಾಗಿರುವ ಅನುಮಾನ: ಜಿಯಾಲಜಿಕಲ್ ಸರ್ವೇಗೆ ಅಪರೂಪದ ವಸ್ತು

author img

By

Published : Jun 21, 2020, 1:38 PM IST

ಭಾರಿ ಸದ್ದಿನೊಂದಿಗೆ ಆಕಾಶದಿಂದ ಬಿದ್ದ ಆಕಾಶಕಾಯದಂತಹ ವಸ್ತುವನ್ನು ಹೆಚ್ಚಿನ ಸಂಶೋಧನೆಗೆ ಜಿಯಾಲಜಿಕಲ್ ಸರ್ವೇ ಆಫ್​ ಇಂಡಿಯಾಗೆ ಕಳುಹಿಸಲಾಗಿದೆ.

meteorite-like object
ಆಕಾಶಕಾಯಂಥಹ ವಸ್ತು-

ಸಾಂಚೋರ್​ (ರಾಜಸ್ಥಾನ): ಮೂರು ಕಿಲೋಗ್ರಾಂ ತೂಕವುಳ್ಳ ಆಕಾಶ ಕಾಯದಂತಹ ವಸ್ತುವನ್ನು ಹೆಚ್ಚಿನ ಸಂಶೋಧನೆಗಾಗಿ ಜಿಯಾಲಜಿಕಲ್​ ಸರ್ವೇ ಆಫ್​ ಇಂಡಿಯಾಗೆ ಕಳುಹಿಸಲಾಗಿದೆ.

ರಾಜಸ್ಥಾನದ ಸ್ಯಾಂಚೋರ್​ ನಗರದ ಬರ್ಸಾಮ್​ ಬೈಪಾಸ್​ನ ಪುಲಿಯಾ ಏರಿಯಾದಲ್ಲಿ ಶುಕ್ರವಾರ ಬೆಳಗ್ಗೆ 6.15ಕ್ಕೆ ಒಂದು ವಿಚಿತ್ರವಾದ ವಸ್ತುವೊಂದು ಪತ್ತೆಯಾಗಿತ್ತು. ಸ್ಥಳಕ್ಕೆ ಸಬ್​ ಡಿವಿಷನಲ್​ ಆಫೀಸರ್​ ಹಾಗೂ ಪೊಲೀಸರು ಧಾವಿಸಿ, ಆ ವಸ್ತುವನ್ನು ವಶಕ್ಕೆ ಪಡೆದು ಜಿಯಾಲಜಿಕಲ್ ಸರ್ವೇ ಆಫ್​ ಇಂಡಿಯಾಗೆ ಹೆಚ್ಚಿನ ಸಂಶೋಧನೆಗೆ ಕಳುಹಿಸಿದ್ದಾರೆ.

ಸ್ಥಳೀಯರು ಹೇಳುವಂತೆ ಬೆಳಗ್ಗೆ ಆಕಾಶದಲ್ಲಿ ಭಾರಿ ಸ್ಫೋಟದ ಶಬ್ಧ ಕೇಳಿಸಿದ್ದು, ಈ ಶಬ್ಧ ಕೇಳಿದ ತಕ್ಷಣ ಆಕಾಶದಿಂದ ಒಂದು ಬಂಡೆಯಂಥಹ ವಸ್ತುವೊಂದು ಬಿದ್ದಿದೆ. ಬಿದ್ದ ಕೆಲವು ಗಂಟೆಗಳವರೆಗೆ ಅತಿಯಾದ ಉಷ್ಣಾಂಶವನ್ನು ಹೊರಸೂಸುತ್ತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.

ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು, ಈ ಅಪರೂಪದ ವಸ್ತುವನ್ನು ಜಿಯಾಲಜಿಕಲ್ ಸರ್ವೇ ಆಫ್​​ ಇಂಡಿಯಾದ ಸುಪರ್ದಿಗೆ ನೀಡಿದ್ದಾರೆ. ಹೆಚ್ಚಿನ ಸಂಶೋಧನೆಯ ನಂತರ ಅದು ಅಪರೂಪದ ವಸ್ತು ಯಾವುದು ಎಂಬ ಮಾಹಿತಿ ಹೊರಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.