ETV Bharat / bharat

ಎಕ್ಸ್​ರೇ ಶೀಟ್​ ಅಪ್​ಲೋಡ್​ ಮಾಡಿದ್ರೆ 5 ಸೆಕೆಂಡ್​​ಗಳಲ್ಲಿ ಕೊರೊನಾ ಪತ್ತೆ: ಯಾವುದೀ ಸಾಫ್ಟ್​ವೇರ್​ - ಕೋವಿಡ್​​-19

ಕೋವಿಡ್​​-19 ಪ್ರಕರಣಗಳು ಹೆಚ್ಚುತ್ತಿರುವ ದೃಷ್ಟಿಯಿಂದ, ರಾಜಸ್ಥಾನದ ಸಾಫ್ಟ್‌ವೇರ್ ಎಂಜಿನಿಯರ್ ದಿವ್ಯಾನ್ಶ್ ಬನ್ಸಲ್ ಶಂಕಿತ ರೋಗಿಯ ಎಕ್ಸರೆ ಸ್ಕ್ಯಾನ್ ಬಳಸಿ ಐದು ಸೆಕೆಂಡುಗಳಲ್ಲಿ ಕೊರೊನಾ ವೈರಸ್​​ ಪತ್ತೆ ಹಚ್ಚುವಂತಹ ಸಾಫ್ಟ್‌ವೇರ್​ ಅಭಿವೃದ್ಧಿಪಡಿಸಿದ್ದಾರೆ.

Divyansh Bansal
ಸಾಫ್ಟ್‌ವೇರ್ ಎಂಜಿನಿಯರ್ ದಿವ್ಯಾನ್ಶ್ ಬನ್ಸಾಲ್
author img

By

Published : Apr 26, 2020, 3:13 PM IST

ಅಜ್ಮೀರ್ (ರಾಜಸ್ಥಾನ): ಶಂಕಿತ ರೋಗಿಯ ಎಕ್ಸರೇ ಸ್ಕ್ಯಾನ್ ಶೀಟ್​ ಬಳಸಿ ಐದು ಸೆಕೆಂಡುಗಳಲ್ಲಿ ಕೋವಿಡ್​​-19 ಪತ್ತೆ ಹಚ್ಚುವಂತಹ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿರುವುದಾಗಿ ಡೆಹ್ರಾಡೂನ್ ತಾಂತ್ರಿಕ ವಿಶ್ವವಿದ್ಯಾಲಯದ ಸಾಫ್ಟ್‌ವೇರ್ ಎಂಜಿನಿಯರ್​ ಹೇಳಿಕೊಂಡಿದ್ದಾರೆ.

ಅಜ್ಮೀರ್ ಜಿಲ್ಲೆಯ ತೇಜ ಚೌಕ್ ನಿವಾಸಿ ಬನ್ಸಾಲ್ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಕೇವಲ ಐದು ನಿಮಿಷಗಳಲ್ಲಿ 1,000 ಜನರನ್ನು ಪರೀಕ್ಷಿಸುವಂತಹ ಸಾಫ್ಟ್‌ವೇರ್​​ನ್ನು ರಚಿಸಿದ್ದಾರಂತೆ. ಈ ಸಾಫ್ಟ್‌ವೇರ್, ಪರೀಕ್ಷಾ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ ವೈದ್ಯರಿಗೆ ಸೋಂಕು ತಗುಲುವ ಅಪಾಯವನ್ನೂ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಸಾಫ್ಟ್​ವೇರ್​ ಮೂಲಕ ಕೊರೊನಾ ಅಷ್ಟೇ ಅಲ್ಲ ನ್ಯುಮೋನಿಯಾ ಕೂಡ ಪತ್ತೆ ಮಾಡಬಹುದು.

ಇನ್ನು ಸಾಫ್ಟ್‌ವೇರ್​ ಅ​ನ್ನು ಸರ್ಕಾರ ಅನುಮೋದಿಸಿದರೆ ತಂತ್ರಜ್ಞಾನವನ್ನು ಉಚಿತವಾಗಿ ಹಂಚಿಕೊಳ್ಳುವುದಾಗಿ ಬನ್ಸಲ್​ ಹೇಳಿದ್ದಾರೆ. ಇವರ ಪ್ರಕಾರ, ಕೊರೊನಾ ವೈರಸ್​ಅ​ನ್ನು ಗುರುತಿಸುವ ವಿಧಾನ ತುಂಬಾ ಸರಳ. ಮತ್ತು ಸಾಫ್ಟ್‌ವೇರ್‌ನಲ್ಲಿ ಶಂಕಿತ ವ್ಯಕ್ತಿಯ ಎಕ್ಸರೆ ಸ್ಕ್ಯಾನ್​ನ್ನು ಅಪ್‌ಲೋಡ್ ಮಾಡುವ ಮೂಲಕ ವೈದ್ಯರು ತಕ್ಷಣ ಫಲಿತಾಂಶವನ್ನು ಪಡೆಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.