ETV Bharat / bharat

ಕೋವಿಡ್​ ನಾಗಾಲೋಟ​:  ದೇಶದಲ್ಲಿ ಟಾಪ್​ 5ನೇ ಸ್ಥಾನಗಿಟ್ಟಿಸಿಕೊಂಡ ರಾಜಸ್ಥಾನ! - 10,000 ರ ಗಡಿ ದಾಟಿದ ರಾಜಸ್ಥಾನ

10,000 ರ ಗಡಿ ದಾಟಿದ ರಾಜ್ಯ ರಾಜಸ್ಥಾನ ಈಗ ದೇಶದಲ್ಲಿ ಐದನೇ ಸ್ಥಾನಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 10,084 ಕೊರೊನಾ ಪ್ರಕರಣಗಳ ಪೈಕಿ 7,359 ಮಂದಿ ಚೇತರಿಸಿಕೊಂಡಿದ್ದಾರೆ.

Covid
ಕೋವಿಡ್
author img

By

Published : Jun 6, 2020, 12:32 PM IST

ಜೈಪುರ: ರಾಜಸ್ಥಾನದಲ್ಲಿ ಕೋವಿಡ್​ -19 ರೋಗಿಗಳ ಸಂಖ್ಯೆ 10,000 ದಾಟಿದೆ. ಶುಕ್ರವಾರ ರಾತ್ರಿಯವರೆಗೆ 218 ಸಾವುಗಳು ವರದಿಯಾಗಿವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಇಂದು ತಿಳಿಸಿದ್ದಾರೆ.

ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ಗುಜರಾತ್ ನಂತರದಲ್ಲಿ 10,000 ರ ಗಡಿಯನ್ನು ದಾಟಿದ ರಾಜ್ಯ ರಾಜಸ್ಥಾನ, ಈಗ ದೇಶದಲ್ಲಿ ಐದನೇ ಸ್ಥಾನಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು 10,084 ಕೊರೊನಾ ಪ್ರಕರಣಗಳ ಪೈಕಿ 7,359 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 6,818 ಜನರನ್ನು ಬಿಡುಗಡೆ ಮಾಡಲಾಗಿದ್ದು, 2,507 ಸಕ್ರಿಯ ಪ್ರಕರಣಗಳು ಉಳಿದಿವೆ.

ಇನ್ನು 10,084 ಪ್ರಕರಣಗಳಲ್ಲಿ, 2,913 ವಲಸಿಗರು ಲಾಕ್​ಡೌನ್ ಸಮಯದಲ್ಲಿ ವಿವಿಧ ರಾಜ್ಯಗಳಿಂದ ಬಂದವರಾಗಿದ್ದಾರೆ ಎಂದು ಸಿಂಗ್ ಹೇಳಿದರು. ರಾಜ್ಯದಲ್ಲಿ ಈವರೆಗೆ 4,80,910 ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ 5,477 ಮಾದರಿಗಳ ಫಲಿತಾಂಶಗಳು ವರದಿಗಾಗಿ ಕಾಯುತ್ತಿವೆ.

ರಾಜ್ಯದ ಎಲ್ಲ 33 ಜಿಲ್ಲೆಗಳೂ ಕೋವಿಡ್​ ಸೋಂಕಿಗೆ ಒಳಗಾಗಿದೆ. ಅದರಲ್ಲಿ ಜೈಪುರ ಒಂದರಲ್ಲೇ 2,152 ಕೊರೊನಾ ರೋಗಿಗಳಿದ್ದು ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಂತರ ಜೋಧ್​ಪುರ ಸ್ಥಾನ ಪಡೆದುಕೊಂಡಿದೆ, ಇಲ್ಲಿ 1,706 ಸೋಂಕಿತರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.