ಜೈಪುರ (ರಾಜಸ್ಥಾನ): ರಾಜಸ್ಥಾನ ರಾಜಕೀಯ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದೆ. ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿದೆ.
ಬಹಿರಂಗವಾಗಿಯೇ ಅಶೋಕ್ ಗೆಹ್ಲೋಟ್ ನಾಯಕತ್ವದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದ ಸಚಿನ್ ಪೈಲಟ್ ಅವರನ್ನು ಡಿಸಿಎಂ ಹುದ್ದೆಯಿಂದ ಕಾಂಗ್ರೆಸ್ ಉಚ್ಚಾಟನೆ ಮಾಡಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಜವಾಬ್ದಾರಿಯಿಂದಲೂ ಬಿಡುಗಡೆ ಮಾಡಿದೆ.
ಸಚಿನ್ ಪೈಲಟ್ ಜತೆ ಗುರುತಿಸಿಕೊಂಡಿದ್ದ ಇಬ್ಬರು ಮಂತ್ರಿಗಳಿಗೂ ಕಾಂಗ್ರೆಸ್ ಉಚ್ಚಾಟನೆ ಬಿಸಿ ಮುಟ್ಟಿಸಿದೆ. ಸಚಿವರಾದ ರಮೇಶ್ ಮೀನಾ ಮತ್ತು ವಿಶ್ವೇಂದರ್ ಸಿಂಗ್ ಅವರನ್ನು ಗೆಹ್ಲೋಟ್ ಸಂಪುಟದಿಂದ ಕೈಬಿಡಲಾಗಿದೆ. ಹಿರಿಯ ನಾಯಕ ಗೋವಿಂದ ದೋಸ್ತಾರಾ ಅವರನ್ನು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
-
Rajasthan Governor Kalraj Mishra has accepted CM Ashok Gehlot's proposal to remove Sachin Pilot as Deputy CM, and Vishvender Singh and Ramesh Meena as ministers. https://t.co/FGppoHMV5c
— ANI (@ANI) July 14, 2020 " class="align-text-top noRightClick twitterSection" data="
">Rajasthan Governor Kalraj Mishra has accepted CM Ashok Gehlot's proposal to remove Sachin Pilot as Deputy CM, and Vishvender Singh and Ramesh Meena as ministers. https://t.co/FGppoHMV5c
— ANI (@ANI) July 14, 2020Rajasthan Governor Kalraj Mishra has accepted CM Ashok Gehlot's proposal to remove Sachin Pilot as Deputy CM, and Vishvender Singh and Ramesh Meena as ministers. https://t.co/FGppoHMV5c
— ANI (@ANI) July 14, 2020
ಇನ್ನೊಬ್ಬ ಹಿರಿಯ ನಾಯಕ ಗಣೇಶ್ ಘೂಘ್ರಾ ಅವರಿಗೆ ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷರ ಜವಾಬ್ದಾರಿ ವಹಿಸಲಾಗಿದೆ. ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಬದಲಾವಣೆಗೆ ಸಚಿನ್ ಪೈಲಟ್ ಪಟ್ಟು ಹಿಡಿದಿದ್ದರು. ಹಿರಿಯ ನಾಯಕರು ಎಷ್ಟೇ ಮನವೊಲಿಸಿದರೂ ಸಚಿನ್ ಪೈಲಟ್ ಪಟ್ಟು ಸಡಿಲಿಸಿರಲಿಲ್ಲ. ನವದೆಹಲಿಯಲ್ಲಿ ಬೆಂಬಲಿಗರೊಂದಿಗೆ ಠಿಕಾಣಿ ಹೂಡಿದ್ದರು. ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೂ ಹಾಜರಾಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಸಚಿನ್ ಪೈಲಟ್ ಮತ್ತು ಇಬ್ಬರು ಬೆಂಬಲಿಗರಿಗೆ ಉಚ್ಚಾಟನೆ ಅಸ್ತ್ರ ಪ್ರಯೋಗಿಸುವ ಮೂಲಕ ಬಿಸಿ ಮುಟ್ಟಿಸಿದೆ. ಕಾಂಗ್ರೆಸ್ ಪಕ್ಷದ ಈ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಪ್ರಬಲ ಗುಜ್ಜರ್ ಸಮುದಾಯಕ್ಕೆ ಸೇರಿರುವ ಸಚಿನ್ ಪೈಲಟ್ ಅವರ ಮುಂದಿನ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.