ETV Bharat / bharat

ತೆಲುಗು ರಾಜ್ಯಗಳಲ್ಲಿ ವರುಣಾಘಾತಕ್ಕೆ 13 ಬಲಿ: ಯೆಲ್ಲೋ ಅಲರ್ಟ್ ಘೋಷಣೆ

ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ವಿವಿಧೆಡೆ ಭಾರಿ ಮಳೆಯಾಗಿ ಸುಮಾರು ಅನೇಕರು ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

rain effect
ಮಳೆ ಅವಾಂತರ
author img

By

Published : Oct 14, 2020, 4:45 PM IST

ಹೈದರಾಬಾದ್: ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಹಲವೆಡೆ ಸುರಿದ ಮಳೆ ಸಾಕಷ್ಟು ಅವಾಂತರವನ್ನು ಸೃಷ್ಟಿಸಿದೆ. ಆಸ್ತಿ-ಪಾಸ್ತಿ ನಷ್ಟ ಮಾತ್ರವಲ್ಲದೇ ಸುಮಾರು 13 ಮಂದಿ ಮಳೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಅಧಿಕೃತ ಮೂಲಗಳ ಮಾಹಿತಿಯಂತೆ, ಮಂಗಳವಾರ ಬೆಳಗ್ಗೆ 8.30ಕ್ಕೆ ಮಳೆ ಆರಂಭವಾಗಿದ್ದು, ರಾತ್ರಿ 9 ಗಂಟೆಯವರೆಗೆ ಧಾರಾಕಾರವಾಗಿ ಸುರಿದಿದೆ. ತೆಲಂಗಾಣದ ಮೇಡ್ಚಾಲ್, ಮಲ್ಕಜ್​ಗಿರಿ ಜಿಲ್ಲೆಯ ಸಿಂಗಾಪುರ ಟೌನ್​ಶಿಪ್​ನಲ್ಲಿ 292.5 ಮಿಲಿ ಮೀಟರ್​ನಷ್ಟು ಮಳೆಯಾಗಿದೆ. ಯಡಾದ್ರಿ- ಬೋಂಗೀರ್ ಜಿಲ್ಲೆಯ ವೆರ್ಕಟ್ ಪಲ್ಲೆ ಎಂಬಲ್ಲಿ 25.8 ಮಿಲಿ ಮೀಟರ್ ಮಳೆಯಾಗಿದೆ.

ಹೈದರಾಬಾದ್ ನಗರದ ಸುಮಾರು ಪ್ರದೇಶಗಳು ಜಲಾವೃತವಾಗಿದ್ದು, ಇಲ್ಲಿನ ವಿವಿಧ ಪ್ರದೇಶಗಳ ಸರಾಸರಿ ಮಳೆಯ ಪ್ರಮಾಣ 98.9ರಷ್ಟಿದೆ.

  • ♦ The Depression over Telangana moved further west northwestwards with a speed of 32 kmph during past 06 hours and lay centered at 0830 hours IST of today, the 14th October, 2020, over North Interior Karnataka & adjoining areas of Maharashtra and Telangana, near latitude 17.7°N

    — India Met. Dept. (@Indiametdept) October 14, 2020 " class="align-text-top noRightClick twitterSection" data=" ">

ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಿಎಂ ಕೆ. ಚಂದ್ರಶೇಖರ ರಾವ್ ಕೂಡಾ ಮಳೆಯ ಅವಾಂತರಗಳ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ನಡೆಸಿದ್ದಾರೆ.

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರು ಎನ್‌ಡಿಆರ್‌ಎಫ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ರಕ್ಷಣಾ ಕಾರ್ಯಕ್ಕೆ ಧಾವಿಸುವಂತೆ ಸೂಚನೆ ನೀಡಿದ್ದಾರೆ. ಹೈದರಾಬಾದ್ ಮತ್ತು ತೆಲಂಗಾಣದ ಇತರ ಕಡೆಗಳಲ್ಲಿ ಪರಿಹಾರ ಕ್ರಮಗಳಿಗೆ ಎನ್​ಡಿಆರ್​ಎಫ್ ಧಾವಿಸಲಿದೆ.

ಭಾರತೀಯ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್

ಈಗಾಗಲೇ ಸಾಕಷ್ಟು ಹಾನಿಮಾಡಿರುವ ಮಳೆ ಮುಂದುವರೆಯುವ ಸಾಧ್ಯತೆ ಇರುವ ಕಾರಣದಿಂದ, ಭಾರತೀಯ ಹವಾಮಾನ ಇಲಾಖೆ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದೆ.

ಹೈದರಾಬಾದ್ ನಗರದಲ್ಲಿ ಹಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ರಾಜ್ಯದ ಪಶ್ಚಿಮ ಭಾಗದಲ್ಲಿನ ಒತ್ತಡ ವಾಯವ್ಯದ ಕಡೆಗೆ ಚಲಿಸಲಿರುವ ಕಾರಣದಿಂದ ಈಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.