ETV Bharat / bharat

ಶ್ರಮಿಕ್​​​ ಹೆಸರಿನಲ್ಲಿ 'ಕೊರೊನಾ ಎಕ್ಸ್​ಪ್ರೆಸ್' ರೈಲು ಓಡಿಸಲಾಗುತ್ತಿದೆ: ಮಮತಾ ಬ್ಯಾನರ್ಜಿ

author img

By

Published : May 30, 2020, 10:10 AM IST

ಕೊರೊನಾ ಹಾಟ್​ಸ್ಪಾಟ್​ ಪ್ರದೇಶಗಳಿಂದ ರೈಲ್ವೆ ಇಲಾಖೆ ಹೆಚ್ಚು ಜನರನ್ನು ಕರೆ ತರುತ್ತಿದೆ. ಆದರೆ ರೈಲಿನಲ್ಲಿ ಏಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

Railways running Corona Express
ಮಮತಾ ಬ್ಯಾನರ್ಜಿ

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಶ್ರಮಿಕ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಭಾರತೀಯ ರೈಲ್ವೆ ಇಲಾಖೆ 'ಕೊರೊನಾ ಎಕ್ಸ್‌ಪ್ರೆಸ್' ರೈಲುಗಳನ್ನು ಓಡಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕಾನೂನು ಎಲ್ಲರಿಗೂ ಸಮಾನವಾಗಿದೆ. ಆದರೆ ಎಲ್ಲಾ ರೈಲುಗಳು ಪೂರ್ಣ ಸಾಮರ್ಥ್ಯದಷ್ಟು ಜನರನ್ನು ಏಕೆ ಸಾಗಿಸುತ್ತಿವೆ? ರೈಲಿನಲ್ಲಿ ಏಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ? ಪ್ರಯಾಣಿಕರಿಗೆ ರೈಲುಗಳಲ್ಲಿ ನೀರು ಮತ್ತು ಆಹಾರವನ್ನೂ ನೀಡಲಾಗುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

'ಶ್ರಮಿಕ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಭಾರತೀಯ ರೈಲ್ವೆ 'ಕೊರೊನಾ ಎಕ್ಸ್‌ಪ್ರೆಸ್' ರೈಲು ಓಡಿಸುತ್ತಿದೆ. ಹೆಚ್ಚುವರಿ ರೈಲುಗಳನ್ನು ಏಕೆ ಓಡಿಸುತ್ತಿಲ್ಲ. ನಾನು ಒಮ್ಮೆ ರೈಲ್ವೆ ಸಚಿವೆಯಾಗಿದ್ದೆ. ಆಗ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೆ. ಆದರೆ ಈಗೇಕೆ ಮಾಡಲು ಸಾಧ್ಯವಾಗುತ್ತಿಲ್ಲ? ಕೊರೊನಾ ಹಾಟ್​ಸ್ಪಾಟ್​ ಪ್ರದೇಶಗಳಿಂದ ರೈಲ್ವೆ ಇಲಾಖೆ ಹೆಚ್ಚು ಜನರನ್ನು ಕರೆ ತರುತ್ತಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.