ನವದೆಹಲಿ: ಕೇಂದ್ರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಕಾನೂನುಗಳ ವಿರುದ್ಧ ಇಂದು ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದ್ದು, ಇದು ಹಿಂಸಾಚಾರ ರೂಪ ಪಡೆದುಕೊಂಡಿರುವ ಕಾರಣ ಹಲವು ಮಂದಿ ತೊಂದರೆ ಅನುಭವಿಸಿದ್ದಾರೆ.
ಓದಿ: ಕೆಂಪುಕೋಟೆಗೆ ಹಾನಿ, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಧ್ವಂಸ; 18 ಪೊಲೀಸರಿಗೆ ಗಾಯ
ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡ ಕಾರಣ ದೆಹಲಿಯ ಅನೇಕ ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮೆಟ್ರೋ ಸಂಚಾರ ಕೂಡ ಬಂದ್ ಮಾಡಲಾಗಿತ್ತು. ಹೀಗಾಗಿ ಬೇರೆ ಬೇರೆ ಸ್ಥಗಳಿಗೆ ಹೋಗಬೇಕಾದ ಪ್ರಮಾಣಿಕರು ರೈಲು ತಪ್ಪಿಸಿಕೊಂಡಿದ್ದಾರೆ.
ರೈಲ್ವೆ ಪ್ರಯಾಣ ತಪ್ಪಿಸಿಕೊಂಡಿರುವ ಪ್ರಯಾಣಿಕರಿಗೆ ಇದೀಗ ರೈಲ್ವೆ ಇಲಾಖೆ ಹಣ ಮರುಪಾವತಿ ಮಾಡಲು ನಿರ್ಧರಿಸಿದ್ದು, ಆದಷ್ಟು ಬೇಗ ಹಣ ಹಿಂದಿರುಗಿಸುವುದಾಗಿ ಹೇಳಿದೆ. ರೈತರ ಪ್ರತಿಭಟನೆ ಹಿಂಸಾಚಾರ ಪಡೆದುಕೊಂಡ ಕಾರಣ GTK ರಸ್ತೆ, ಔಟರ್ ರಿಂಗ್ ರೋಡ್, ಮಧುಬನ್ ಚೌಕ್, ಪಲ್ಲಾ ರೋಡ್, ವಜೀರಾಬಾದ್ ರೋಡ್, ವಿಕಾಸ್ ಮಾರ್ಗ್ ನೋಯ್ಡಾ ರೋಡ್ಗಳಲ್ಲಿ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು.