ETV Bharat / bharat

ಭಾರತೀಯ ರೈಲ್ವೇ ನೇಮಕಾತಿ: ₹ 18, 20, 22 ಸಾವಿರ ವೇತನದ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ!

author img

By

Published : Jun 9, 2019, 10:01 PM IST

ಭಾರತೀಯ ರೈಲ್ವೇಯ ದಕ್ಷಿಣ ವಿಭಾಗವು ನೇಮಕಾತಿಯ ಕುರಿತು ಅಧಿಸೂಚನೆ ಹೊರಡಿಸಿದೆ. ಒಟ್ಟು 95 ಸ್ಥಾನಗಳಿಗೆ ಆಹ್ವಾನಿಸಿದ್ದು, ಅರ್ಜಿದಾರರು ಆನ್​ಲೈನ್ ಮುಖಾಂತರ ಕೋರಿಕೆ ಸಲ್ಲಿಸಬಹುದು. ಅಂಚೆ ಮೂಲಕ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಜೂನ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ರೈಲ್ವೇ ಇಲಾಖೆ ದಕ್ಷಿಣ ವಿಭಾಗದಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಸಹಾಯಕ, ಡಾಟಾ ಎಂಟ್ರಿ ಆಪರೇಟರ್​ ಹಾಗೂ ಡಿಜಿಟಲ್ ಆಫೀಸ್ ಸಹಾಯಕ ಹುದ್ದೆಗೆ ಖಾಯಂ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ.

ಭಾರತೀಯ ರೈಲ್ವೇಯ ದಕ್ಷಿಣ ವಿಭಾಗವು ನೇಮಕಾತಿಯ ಕುರಿತು ಅಧಿಸೂಚನೆ ಹೊರಡಿಸಿದೆ. ಒಟ್ಟು 95 ಸ್ಥಾನಗಳಿಗೆ ಆಹ್ವಾನಿಸಿದ್ದು, ಅರ್ಜಿದಾರರು ಆನ್​ಲೈನ್ ಮುಖಾಂತರ ಕೋರಿಕೆ ಸಲ್ಲಿಸಬಹುದು. ಅಂಚೆ ಮೂಲಕ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಜೂನ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಅರ್ಹತೆ ಏನು?
ಮೇಲೆ ಸೂಚಿಸಿದ ಮೂರು ಹುದ್ದೆಗಳಿಗೆ ಅರ್ಜಿದಾರರು 18-28 ವಯಸ್ಸಿನಲ್ಲಿರಬೇಕು. ಎಸ್​ಸಿ/ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿಗೆ 2 ವರ್ಷ ವಿನಾಯಿತಿ ನೀಡಲಾಗಿದೆ. ವಿಶೇಷಚೇತನರಿಗೆ 10 ವರ್ಷ ರಿಯಾಯಿತಿ ಇದೆ ಎಂದು ಹೇಳಿದೆ.

ಅರ್ಜಿ ಸಲ್ಲಿಕೆಯ ಶುಲ್ಕ:
ಅರ್ಜಿದಾರರ ಬಿಸಿಎ/ಕಂಪ್ಯೂಟರ್ ವಿಜ್ಞಾನದಲ್ಲಿ ಬಿಎಸ್​ಸಿ ಅಥವಾ ಐಟಿ ಪದವಿ ಅಥವಾ ತತ್ಸಮಾನ ಯಾವುದೇ ಪದವಿ ಮುಗಿಸಿದವರು ಹಾಗೂ ಎಂಎಸ್​ ಆಫಿಸ್​ 2010 ಅಥವಾ ನೂತನ ವರ್ಶನ್‌​ನಲ್ಲಿ ಪರಿಣತಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹ 500 ನಿಗದಿಪಡಿಸಲಾಗಿದೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗೆ ಶುಲ್ಕದಲ್ಲಿ ₹ 400 ಮರಳಿಸಲಾಗುತ್ತದೆ. ಎಸ್​ಸಿ/ಎಸ್​ಟಿ ಅಭ್ಯರ್ಥಿಗಳಿಗೆ ₹ 250 ಅರ್ಜಿ ದರವಿದೆ.

ಮಾಸಿಕ ಸಂಬಳ:
ಇಲಾಖೆ ನಡೆಸಿದ ಎಲ್ಲಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಜಿದಾರರಿಗೆ ಮಾಸಿಕ ಸಂಬಳ, 'ಜಡ್​' ಶ್ರೇಣಿ ನಗರದಲ್ಲಿ ನಿಯೋಜನೆಗೊಂಡವರಿಗೆ ₹ 18,500, 'ವೈ' ಶ್ರೇಣಿ ನಗರ- ₹ 20,000 ಹಾಗೂ 'ಎಕ್ಸ್​' ಶ್ರೇಣಿ ನಗರ- ₹ 22,000 ನೀಡಲಾಗುವುದು ಎಂದು ಭಾರತೀಯ ರೈಲ್ವೇ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಭಾರತೀಯ ರೈಲ್ವೇಯ ವೆಬ್​ಸೈಟ್​ಗೆ ಭೇಟಿ ನೀಡಬಹುದು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.