ನವದೆಹಲಿ: ಎಲ್ಲ ರಾಜ್ಯಗಳು ತಮ್ಮೊಂದಿಗೆ ಸರಿಯಾಗಿ ಸಹಕಾರ ನೀಡಿದರೆ ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಎಲ್ಲ ವಲಸೆ ಕಾರ್ಮಿಕರು ತಮ್ಮ ತಮ್ಮ ಊರು ಸೇರಿಕೊಳ್ಳಲಿದ್ದಾರೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ನೀಡಿರುವ ಸೂಚನೆಯಂತೆ ಮೇ 1ರಿಂದಲೂ ದೇಶದಲ್ಲಿ ಪ್ರತಿದಿನ 300 ಶ್ರಮಿಕ್ ರೈಲು ಓಡಾಟ ಮಾಡುತ್ತಿದ್ದು, ಎಲ್ಲ ರಾಜ್ಯಗಳಿಂದಲೂ ನಮಗೆ ಸರಿಯಾದ ಸಹಕಾರ ಅವಶ್ಯಕ ಎಂದಿದ್ದಾರೆ. ವಿವಿಧ ರಾಜ್ಯಗಳಲ್ಲಿ 3.6 ಲಕ್ಷ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದು, ಈಗಾಗಲೇ ಅವರನ್ನ ಅವರ ತವರು ರಾಜ್ಯಗಳಿಗೆ ಕರೆದುಕೊಂಡು ಹೋಗುವ ಕೆಲಸ ಆಗ್ತಿದೆ.
-
I appeal to all the States to give permission to evacuate and bring back their stranded migrants so that we can get all of them back to their homes in the next 3-4 days itself.
— Piyush Goyal (@PiyushGoyal) May 10, 2020 " class="align-text-top noRightClick twitterSection" data="
">I appeal to all the States to give permission to evacuate and bring back their stranded migrants so that we can get all of them back to their homes in the next 3-4 days itself.
— Piyush Goyal (@PiyushGoyal) May 10, 2020I appeal to all the States to give permission to evacuate and bring back their stranded migrants so that we can get all of them back to their homes in the next 3-4 days itself.
— Piyush Goyal (@PiyushGoyal) May 10, 2020
ಎಲ್ಲ ಶ್ರಮಿಕ್ ರೈಲುಗಳಲ್ಲಿ 24 ಬೋಗಿಗಳಿದ್ದು, ಪ್ರತಿಯೊಂದು 72 ಸೀಟ್ ಸಾಮರ್ಥ್ಯ ಹೊಂದಿದೆ. ಒಂದು ಬೋಗಿಯಲ್ಲಿ 54 ಜನರು ಪ್ರಯಾಣಿಸಬಹುದಾಗಿದೆ. ಆರಂಭದಲ್ಲಿ ಹಣ ಪಡೆದುಕೊಂಡು ಸಂಚರಿಸುತ್ತಿದ್ದ ರೈಲು ಇದೀಗ ಉಚಿತವಾಗಿ ಕಾರ್ಮಿಕರನ್ನ ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಒಂದು ರೈಲು ಒಂದು ಸಲ ಪ್ರಯಾಣ ಬೆಳೆಸಲು 80 ಲಕ್ಷ ರೂ ಖರ್ಚು ಆಗುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕೇರಳ, ಬಿಹಾರ, ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಿಂದ ಶ್ರಮಿಕ್ ರೈಲು ವಿವಿಧ ರಾಜ್ಯಗಳಿಗೆ ಪ್ರಯಾಣ ಬೆಳೆಸಿವೆ. ಕೇಂದ್ರ ರೈಲ್ವೆ ಇಲಾಖೆ ಆಂಧ್ರಪ್ರದೇಶ(1), ಬಿಹಾರ(87), ಹಿಮಾಚಲ ಪ್ರದೇಶ(1), ಜಾರ್ಖಂಡ್(16), ಮಧ್ಯಪ್ರದೇಶ(24), ಮಹಾರಾಷ್ಟ್ರ(3), ಒಡಿಶಾ(20), ರಾಜಸ್ಥಾನ(4), ತೆಲಂಗಾಣ(2), ಉತ್ತರಪ್ರದೇಶ(127) ಪಶ್ಚಿಮ ಬಂಗಾಳ(2) ರೈಲು ಕಳುಹಿಸಿದೆ.
ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು, ಮೇ.17ಕ್ಕೆ ಮುಕ್ತಾಯಗೊಳ್ಳಲಿದೆ. ಇದರ ಮಧ್ಯೆ ವಲಸೆ ಕಾರ್ಮಿಕರು ತಮ್ಮ ತಮ್ಮ ತವರು ರಾಜ್ಯಗಳಿಗೆ ತೆರಳಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಬೇರೆ ಬೇರೆ ದೇಶಗಳಲ್ಲಿರುವ ಭಾರತೀಯರನ್ನು ಕರೆತರುತ್ತಿದೆ.