ETV Bharat / bharat

ಕೊರೊನಾ ವಿರುದ್ಧದ ಹೋರಾಟ: ಕೈ ಆಡಳಿತದ ರಾಜ್ಯಗಳನ್ನು ಕೊಂಡಾಡಿದ ರಾಗಾ - ಕೈ ಆಡಳಿತದ ರಾಜ್ಯಗಳನ್ನ ಕೊಂಡಾಡಿದ ರಾಗಾ

ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ, ಛತ್ತೀಸ್​ಗಢ, ಪಂಜಾಬ್ ಮತ್ತು ಪುದುಚೇರಿ ಮಹಾಮಾರಿ ಕೊರೊನಾ ವಿರುದ್ಧ ಧೈರ್ಯದಿಂದ ಹೋರಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.

Rahul praises Congress-ruled states in fight against COVID-19
ಕೈ ಆಡಳಿತದ ರಾಜ್ಯಗಳನ್ನ ಕೊಂಡಾಡಿದ ರಾಗಾ
author img

By

Published : Apr 17, 2020, 7:24 PM IST

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಕಾರ್ಯವನ್ನು ಹೊಗಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಲ್ಲಿ ಇಚ್ಛಾಶಕ್ತಿ ಇರುತ್ತದೆಯೋ ಅಲ್ಲಿ ಒಂದು ಮಾರ್ಗ ಇರುತ್ತದೆ ಎಂದಿದ್ದಾರೆ

'ಕಾಂಗ್ರೆಸ್ ಆಡಳಿತದ ರಾಜ್ಯಗಳಾದ ರಾಜಸ್ಥಾನ, ಛತ್ತೀಸ್​ಗಢ, ಪಂಜಾಬ್ ಮತ್ತು ಪುದುಚೇರಿ ಕೊರೊನಾ ವೈರಸ್ ವಿರುದ್ಧ ಧೈರ್ಯದಿಂದ ಹೋರಾಡುತ್ತಿವೆ. ಹೊಸ ವಿಶೇಷ ಆಸ್ಪತ್ರೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಛತ್ತೀಸ್​ಗಢದಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನು 20 ದಿನಗಳಲ್ಲಿ ಸಿದ್ಧಪಡಿಸಲಾಗಿದೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

  • कॉंग्रेस शासित राज्य: राजस्थान,पंजाब, छत्तीसगढ़ और पुदुच्चेरी #Covid19 का डटकर सामना कर रहे हैं। नए, विशेष अस्पताल तैयार किए जा रहे हैं, जैसे छत्तीसगढ़ में यह 200 बेड का विशेष-कोरोना अस्पताल जो मात्र 20 दिन में इलाज के लिए तैयार किया गया है।जहाँ चाह, वहाँ राह। pic.twitter.com/RYs1sayphB

    — Rahul Gandhi (@RahulGandhi) April 17, 2020 " class="align-text-top noRightClick twitterSection" data=" ">

ಕೈ ಆಡಳಿತದ ರಾಜ್ಯಗಳನ್ನು ಅನುಸರಿಸಲು ನವದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಸಲಗೆ ನೀಡಿದ್ದ ಕಾಂಗ್ರೆಸ್, ರಾಜಸ್ಥಾನ ಮತ್ತು ಪಂಜಾಬ್ ಸರ್ಕಾರಗಳು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕಗಳ ವಿದ್ಯುತ್ ಬಿಲ್​ಗಳಲ್ಲಿ ನಿಗದಿತ ಶುಲ್ಕ ಪಡೆಯುವುದನ್ನು ಮುಂದೂಡಿದೆ. ದೆಹಲಿ ಸರ್ಕಾರ ಕೂಡ ಇದನ್ನು ಅನುಸರಿಸುವಂತೆ ಕೇಳಿಕೊಂಡಿತ್ತು.

ಛತ್ತೀಸ್​​ಗಢ ಸರ್ಕಾರವು 86 ರಷ್ಟು ಕುಟುಂಬಗಳಿಗೆ ಎರಡು ತಿಂಗಳ ಪಡಿತರವನ್ನು ಉಚಿತವಾಗಿ ನೀಡಿದೆ. ಇದರಲ್ಲಿ 70 ಕೆಜಿ ಅಕ್ಕಿ, 2 ಕೆಜಿ ಸಕ್ಕರೆ ಮತ್ತು 3 ಕೆಜಿ ದ್ವಿದಳ ಧಾನ್ಯಗಳನ್ನು ನೀಡಲಾಗಿದೆ. ಅದೇ ರೀತಿ ನವದೆಹಲಿಯ E,F,G,H ವರ್ಗದ ಪ್ರದೇಶದಲ್ಲಿರುವ ಜನರಿಗೆ ಎರಡು ತಿಂಗಳ ಪಡಿತರ ನೀಡಿಬೇಕು ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.