ಅಮೃತಸರ (ಪಂಜಾಬ್): ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಕೃಷಿ ಮಸೂದೆಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ ತೀವ್ರವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕ ರಾಜಕೀಯ ಮುಖಂಡರು ಇದರಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಆದರೆ ಇದಕ್ಕೆ ರೈತರಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂಬರುವ ಚುನಾವಣೆ ಉದ್ದೇಶದಿಂದ ವಿವಿಧ ರಾಜಕೀಯ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದು, ನಿಜವಾಗಲೂ ಅವರಿಗೆ ಅನ್ನದಾತರ ಮೇಲೆ ಯಾವುದೇ ರೀತಿಯ ಅನುಕಂಪವಿಲ್ಲ ಎಂದು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಇದಕ್ಕೂ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಐಷಾರಾಮಿ ರ‍್ಯಾಲಿ ಎಂದು ದೂರಿದ್ದಾರೆ. ಅವರಿಗೆ ರೈತರ ಪರ ಏನಾದ್ರು ಮಾಡಬೇಕೆಂದು ಅನಿಸಿದರೆ ಅದನ್ನ ಸದನದಲ್ಲಿ ಮಾತನಾಡಲಿ ಎಂದು ಹೇಳಿದ್ದಾರೆ.
ಪಂಜಾಬ್ನಲ್ಲಿ 'ರೈಲು ರೋಕೋ' ಆಂದೋಲನ ನಡೆಯುತ್ತಿದ್ದು, ಪಂಜಾಬ್ ರೈತರು ಇದರಲ್ಲಿ ಭಾಗಿಯಾಗಿದ್ದಾರೆ. ಇಂದು ರಾಹುಲ್ ಗಾಂಧಿ ಕೂಡ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಲು ಪಂಜಾಬ್ಗೆ ತೆರಳಿದ್ದರು. ಈ ವೇಳೆ ಅವರು ಬಳಿಕೆ ಮಾಡಿರುವ ಟ್ರ್ಯಾಕ್ಟರ್ ಹೆಚ್ಚಾಗಿ ರೈತರು ತಮ್ಮ ಉಳುಮೆಗಳಲ್ಲಿ ಬಳಕೆ ಮಾಡಲ್ಲ. ಇದೊಂದು ಐಷಾರಾಮಿ ಟ್ರ್ಯಾಕ್ಟರ್ ಆಗಿದೆ ಎಂದು ರೈತ ಮುಖಂಡ ಸುಖ್ವಿಂದರ್ ಸಿಂಗ್ ಸಬ್ರಾನ್ ಹೇಳಿದ್ದಾರೆ.
ಕೃಷಿ ಮಸೂದೆಗಳ ವಿರುದ್ಧ ಉತ್ತರ ಪ್ರದೇಶ, ಹರಿಯಾಣ, ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದು, ಪಂಜಾಬ್ನಲ್ಲಿ ಕಳೆದ ಎರಡು ವಾರಗಳಿಂದ ರೈತರು ರೈಲು ರೋಕೋ ಜಾಥಾದಲ್ಲಿ ಭಾಗಿಯಾಗಿದ್ದಾರೆ.