ನವದೆಹಲಿ: ಕೊರೊನಾ ವೈರಸ್ ನಿಯಂತ್ರಣದಲ್ಲಿ ಭಾರತ ಇತರ ದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ವಿಧಿಸಿರುವ ರಾಷ್ಟ್ರೀಯ ಲಾಕ್‌ಡೌನ್ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಕಾರಾತ್ಮಕವಾಗಿ ಮಾತನಾಡುವುದು ಒಳಿತಲ್ಲ ಎಂದು ಬಿಜೆಪಿ ಹೇಳಿದೆ.
ಲಾಕ್‌ಡೌನ್ ಬಗ್ಗೆ ಇಂತಹ ಹೇಳಿಕೆಗಳು ರಾಹುಲ್ ಗಾಂಧಿಗೆ ಸರಿ ಹೊಂದುವುದಿಲ್ಲ. ನೀವು ಇದನ್ನು (ಭಾರತ) ಇತರ ದೇಶಗಳೊಂದಿಗೆ ಹೋಲಿಸಿದರೂ ನಾವು ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್ ವರ್ಮಾ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ, ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಆದರೆ, ಉತ್ತಮ ಆರೋಗ್ಯವನ್ನು ಕಾಪಾಡಲು ಸರ್ಕಾರ ಎಲ್ಲವನ್ನು ಮಾಡುತ್ತಿದೆ. ಲಾಕ್‌ಡೌನ್ ಜಾರಿ ಆಗಿದ್ದರಿಂದ ಆರ್ಥಿಕತೆ ತೊಂದರೆ ಅನುಭವಿಸಬೇಕಾಗಿತ್ತು. ಸರ್ಕಾರವು 20 ಲಕ್ಷ ಕೋಟಿ ರೂ. ಉತ್ತೇಜಕ ಪ್ಯಾಕೇಜ್ ನೀಡಿದೆ ಎಂದರು.