ETV Bharat / bharat

ಬಿಹಾರ ಚುನಾವಣೆ: ಮುಂದಿನ ವಾರದಿಂದ ರಾಹುಲ್ ಗಾಂಧಿ ಪ್ರಚಾರ ಕಣಕ್ಕೆ

ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ -ಆರ್​ಜೆಡಿ ಜಂಟಿ ಸಮರಭ್ಯಾಸಕ್ಕೆ ತಯಾರಿ ನಡೆದಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರ್ಯಾಲಿ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ಮಹಾಮೈತ್ರಿ ಅಧಿಕಾರಕ್ಕೆ ತರಲು ಸಿದ್ಧತೆ ನಡೆದಿದೆ.

Congress leader Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
author img

By

Published : Oct 17, 2020, 5:48 PM IST

ನವದೆಹಲಿ: ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಈ ನಡುವೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 23ರಂದು ಅಭ್ಯರ್ಥಿಗಳ ಪರ ಮತಯಾಚನೆಗೆ ಬಿಹಾರಕ್ಕೆ ತೆರಳಲಿದ್ದು, ಆ ದಿನ ಎರಡು ಸಭೆ ನಡೆಸಲಿದ್ದಾರೆ.

ಮೊದಲಿಗೆ ಹಿಸುವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನೀತು ಸಿಂಗ್ ಪರ ಸಭೆ ನಡೆಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಿಂದ 9 ಶಾಸಕರು ಗೆದ್ದು ಕಾಂಗ್ರೆಸ್​​​​ಗೆ ಬಲ ನೀಡಿದ್ದರು. ಹಲವು ವರ್ಷಗಳ ಬಳಿಕ ಕಾಂಗ್ರೆಸ್​​ಗೆ ಇಷ್ಟು ಬೆಂಬಲ ವ್ಯಕ್ತವಾಗಿತ್ತು. ಹೀಗಾಗಿ ಭುಮಿಹಾರ್ ಸಮುದಾಯದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಇನ್ನೊಂದು ಸಭೆಯನ್ನು ಕಹಲ್ಗಾಂವ್​​ನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸಿಎಲ್​ಪಿ ನಾಯಕ ಸದಾನಂದ್ ಸಿಂಗ್ ಪುತ್ರ ಮುಖೇಶ್ ಸಿಂಗ್ ಟಿಕೆಟ್ ಪಡೆದಿದ್ದಾರೆ.

ಈ ಕ್ಷೇತ್ರದಲ್ಲಿ 9 ಬಾರಿ ಸದಾನಂದ್ ಸಿಂಗ್ ಎಂಎಲ್​ಎ ಆಗಿ ಆಯ್ಕೆಯಾಗಿದ್ದರು. ಇದೀಗ ಈ ಸ್ಥಾನವನ್ನು ಪುತ್ರನಿಗಾಗಿ ಬಿಟ್ಟುಕೊಟ್ಟಿದ್ದಾರೆ. ಮೂಲಗಳ ಪ್ರಕಾರ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ರಾಹುಲ್​ ಗಾಂಧಿ ಜಂಟಿಯಾಗಿ ಪ್ರಚಾರ ನಡೆಸುವ ಸಾಧ್ಯತೆ ಇದ್ದು, ಇದಿನ್ನೂ ಅಂತಿಮವಾಗಬೇಕಿದೆ.

ಪ್ರತಿ ಹಂತದ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ಕನಿಷ್ಠ 6 ರ್ಯಾಲಿಗಳನ್ನು ಆಯೋಜಿಸಲಾಗಿದೆ. ಈ ನಡುವೆ ಇಂದು ಜಂಟಿ ಸಭೆಯಲ್ಲಿ ಆರ್​​ಜೆಡಿ ತನ್ನ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಆರ್​​​ಜೆಡಿ ನೇತೃತ್ವದ ಮಹಾಮೈತ್ರಿಯಿಂದ ಪ್ರಣಾಳಿಕೆ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.