ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಸುಖದೇವ್ ವಿಹಾರ್ನಲ್ಲಿ ವಲಸೆ ಕಾರ್ಮಿಕರೊಂದಿಗೆ ಇತ್ತೀಚೆಗೆ ನಡೆಸಿದ್ದ ಸಂವಾದವನ್ನು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೆಲವು ದಿನಗಳ ಹಿಂದೆ ನಾನು ಹರಿಯಾಣದಿಂದ ಉತ್ತರ ಪ್ರದೇಶದ ಝಾನ್ಸಿ ಬಳಿಯ ತಮ್ಮ ಊರಿಗೆ ನೂರಾರು ಕಿಲೋ ಮೀಟರ್ವರೆಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದ ವಲಸೆ ಕಾರ್ಮಿಕರ ಗುಂಪನ್ನು ಭೇಟಿಯಾಗಿದ್ದೆ. ಭಾರಿ ಸಂಕಷ್ಟ ಮತ್ತು ಅನ್ಯಾಯ ಅನುಭವಿಸಿದ ನಮ್ಮ ವಲಸೆ ಸಹೋದರರು ಮತ್ತು ಸಹೋದರಿಯರೊಂದಿಗಿನ ಸಂಭಾಷಣೆ ಇದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
- " class="align-text-top noRightClick twitterSection" data="">
ಮೇ 16ರಂದು ಸುಖದೇವ್ ವಿಹಾರ್ ಫ್ಲೈ ಓವರ್ ಬಳಿ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದರು. ನಂತರ ಅವರ ಪಕ್ಷದ ಕಾರ್ಯಕರ್ತರು ವಲಸೆ ಕಾರ್ಮಿಕರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ ಮಾಡಿದ್ದರು.
ಈ ಬಗ್ಗೆ ಮಾತನಾಡಿದ್ದ ದೇವೇಂದ್ರ ಎಂಬ ಕಾರ್ಮಿಕ, ರಾಹುಲ್ ಗಾಂಧಿಯವರು ನಮ್ಮನ್ನ ಭೇಟಿಯಾದರು. ಅವರು ನಮಗಾಗಿ ವಾಹನವನ್ನು ಕಾಯ್ದಿರಿಸಿದ್ದಾರೆ. ಆ ವಾಹನಗಳು ನಮ್ಮನ್ನು ನಮ್ಮ ಮನೆಗಳಿಗೆ ತಲುಪಿಸುತ್ತವೆ ಎಂದು ಹೇಳಿದ್ದರು. ಅಲ್ಲದೆ ನಮಗೆ ಆಹಾರ, ನೀರು ಮತ್ತು ಮಾಸ್ಕ್ಗಳನನ್ನು ನೀಡಿದ್ದಾರೆ ಎಂದಿದ್ದರು.