ETV Bharat / bharat

ದೇಶ ಒಡೆಯಲು ಮೋದಿ ವಿಷ ಬೀಜ ಬಿತ್ತುತ್ತಿದ್ದಾರೆ: ಪ್ರಧಾನಿ ವಿರುದ್ಧ ರಾಗಾ ಮತ್ತೆ  ವಾಗ್ದಾಳಿ - undefined

ವಯನಾಡಿನಲ್ಲಿ ರೋಡ್​ ಶೋ ನಡೆಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿಷ ಬೀಜ ಬಿತ್ತುತ್ತಿದ್ದಾರೆ. ದೇಶ ಜನರಲ್ಲಿ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

Rahul
author img

By

Published : Jun 8, 2019, 3:05 PM IST

ವಯನಾಡು: ದೇಶ ಒಡೆದುಹಾಕಲು ಪ್ರಧಾನಿ ನರೇಂದ್ರ ಮೋದಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದರು.

ತಮ್ಮ ಸಂಸತ್ ಕ್ಷೇತ್ರ ವಯನಾಡಿನಲ್ಲಿ ರೋಡ್​ ಶೋ ನಡೆಸಿ, ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ನಾವು ವಿಷವರ್ತುಲದ ವಿರುದ್ಧ ಹೋರಾಡುತ್ತಿದ್ದೇವೆ. ಪ್ರಧಾನಿ ಮೋದಿ ವಿಷ ಬೀಜ ಬಿತ್ತುತ್ತಿದ್ದಾರೆ. ನಾನು ಕಠಿಣ ಶಬ್ದವನ್ನೇ ಬಳಸುತ್ತಿದ್ದರೂ, ಇದು ಸತ್ಯ. ದೇಶವನ್ನು ಒಡೆದು ಹಾಕಲು ಮೋದಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಯನಾಡಿನಲ್ಲಿ ರಾಹುಲ್ ರೋಡ್​ ಶೋ

ಮೋದಿ ಹಾಗೂ ಅವರ ದ್ವೇಷದ ವಿರುದ್ಧ ನಾವು ಪ್ರೀತಿಂದಲೇ ಹೋರಾಡುತ್ತೇವೆ. ಮೋದಿ ದ್ವೇಷ, ಅಭದ್ರತೆ ಹಾಗೂ ಸುಳ್ಳಿನ ಪ್ರತಿನಿಧಿ ಎಂದರು.

ರಾಹುಲ್​, ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ವಯನಾಡು ಜನರಿಗೆ ಧನ್ಯವಾದ ಹೇಳಿದರು. ವಯನಾಡಿನ ಜನರ ಸಂಕಷ್ಟ ಅರಿತು, ಪರಿಹಾರಕ್ಕಾಗಿ ಕೆಲಸ ಮಾಡುವುದೇ ನನ್ನ ಉದ್ದೇಶ. ವಯನಾಡಿನ ಎಲ್ಲರಿಗೂ ಕಾಂಗ್ರೆಸ್​ ಪಕ್ಷದ ಬಾಗಿಲು ಸದಾ ತೆರೆದಿರುತ್ತೆ ಎಂದರು.

ರಾಹುಲ್​ ಮಾತುಗಳ ನಡುವೆ, ನೆರೆದಿದ್ದ ಕಾಂಗ್ರೆಸ್ಸಿಗರು ಚೌಕೀದಾರ್​ ಚೋರ್​ ಹೈ ಎಂದು ಕೂಗಿದರು. ಚುನಾವಣೆ ಬಳಿಕ ಮೊದಲು ಈ ಘೋಷಣೆ ಕೇಳುತ್ತಿದ್ದೇನೆ ಎಂದು ರಾಹುಲ್ ಮೋದಿ ಅವರನ್ನು ತಿವಿದರು.

Intro:Body:

Rahul

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.