ವಯನಾಡು: ಭಾರಿ ಮಳೆಯಿಂದ ಈ ಬಾರಿಯೂ ಕೇರಳ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇಲ್ಲಿಯವರೆಗೆ 76 ಜನ ಪ್ರಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡಿನಲ್ಲೂ ಭಾರಿ ಪ್ರಮಾಣದ ಹಾನಿ ಆಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 2 ದಿನಗಳ ಪ್ರವಾಸ ಕೈಗೊಂಡಿದ್ದು, ಸಂತ್ರಸ್ತರಿಗೆ ಸಾಂತ್ವನ ಹೇಳುತ್ತಿದ್ದಾರೆ. ವಯನಾಡಿನಲ್ಲಿ ಸ್ಥಾಪಿಸಲಾಗಿರುವ ಹಲವು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ರಾಗಾ, ಅಲ್ಲಿನ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಧೈರ್ಯಗೆಡದಂತೆ ವಿಶ್ವಾಸ ತುಂಬುತ್ತಿದ್ದಾರೆ. ನೆರೆಯಿಂದಾಗಿ ಮನೆ ಮಠ ಕಳೆದುಕೊಂಡು, ಅಪಾಯದಲ್ಲಿದ್ದ ಸಾವಿರಾರು ಮಂದಿಯನ್ನ ಗಂಜಿಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ರಾಹುಲ್ ಮಾಹಿತಿ ನೀಡಿದ್ದಾರೆ.
-
Kerala: Rahul Gandhi, Congress meets and distributes relief material to the people of his Lok Sabha constituency. #Wayanad pic.twitter.com/CJuT6TAAg6
— ANI (@ANI) August 12, 2019 " class="align-text-top noRightClick twitterSection" data="
">Kerala: Rahul Gandhi, Congress meets and distributes relief material to the people of his Lok Sabha constituency. #Wayanad pic.twitter.com/CJuT6TAAg6
— ANI (@ANI) August 12, 2019Kerala: Rahul Gandhi, Congress meets and distributes relief material to the people of his Lok Sabha constituency. #Wayanad pic.twitter.com/CJuT6TAAg6
— ANI (@ANI) August 12, 2019
ಇದೇ ವೇಳೆ, ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವಂತೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಇಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್, ವಯನಾಡು ಡಿಸಿ ಜೊತೆ ಮಾತನಾಡಿದ್ದು, ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ. ಶೀಘ್ರ ಹೆಚ್ಚಿನ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನೂ ಒತ್ತಾಯಿಸಿದ್ದಾರೆ.
-
#KeralaFloods: Death toll rises to 76, due to flood-related incidents across the state. https://t.co/Cg4x1Vbygi
— ANI (@ANI) August 12, 2019 " class="align-text-top noRightClick twitterSection" data="
">#KeralaFloods: Death toll rises to 76, due to flood-related incidents across the state. https://t.co/Cg4x1Vbygi
— ANI (@ANI) August 12, 2019#KeralaFloods: Death toll rises to 76, due to flood-related incidents across the state. https://t.co/Cg4x1Vbygi
— ANI (@ANI) August 12, 2019
ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಇನ್ನೂ ಹೆಚ್ಚಿನ ಸಹಕಾರ ಬೇಕು ಎಂದು ರಾಹುಲ್ ಗಾಂಧಿ ಖುದ್ದು ಸ್ಥಳಕ್ಕೆ ಭೇಟಿ ತಮ್ಮ ಅನುಭವವನ್ನು ಹೇಳಿದ್ದಾರೆ. ಕವಲಪ್ಪಾರಾಕ್ಕೆ ಭೇಟಿ ನೀಡಿದ ರಾಹುಲ್ ಭೂಥಾನಂನಲ್ಲಿ ಭೂಕುಸಿತ ಆಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.