ನವದೆಹಲಿ: ಉಲ್ಬಣಗೊಳ್ಳುತ್ತಿರುವ ಗಡಿ ಉದ್ವಿಗ್ನತೆ ಕುರಿತು ಚರ್ಚಿಸಲು ಭಾರತ-ಚೀನಾ ಮಾಸ್ಕೋದಲ್ಲಿ ಸಭೆ ನಡೆಸಿದ್ದು, ಒಂದು ದಿನದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.
ಗಡಿ ಉದ್ವಿಗ್ನತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಈವರೆಗೆ ಯಾವುದೇ ಸಮಿತಿ ಸಭೆಗಳಿಗೆ ಹಾಜರಾಗಿಲ್ಲ ಎಂದು ಆಡಳಿತ ಪಕ್ಷ ಬಿಜೆಪಿಯ ಟೀಕೆಗೆ ಗುರಿಯಾಗಿದೆ.
ರಕ್ಷಣಾ ಪಡೆಗಳಿಗೆ ಅದರಲ್ಲೂ ವಿಶೇಷವಾಗಿ ಗಡಿ ಭಾಗದ ಪಡೆಗಳಿಗೆ ಪೌಷ್ಟಿಕ ಆಹಾರ ಒದಗಿಸುವ ವ್ಯವಸ್ಥೆ, ಮೇಲ್ವಿಚಾರಣೆ ಕುರಿತು ಚರ್ಚಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಸಭೆಯಲ್ಲಿ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಜವಾನರಿಗೆ ನೀಡಲಾಗುವ ಆಹಾರದಲ್ಲಿನ ವ್ಯತ್ಯಾಸವನ್ನು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದರು. ಜವಾನ್ ತೇಜ್ ಬಹದ್ದೂರ್, ಅಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಕುರಿತು ತಮ್ಮ ವಿಡಿಯೋ ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. ನಂತರ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಮೂಲಗಳ ಪ್ರಕಾರ, ಅಧಿಕಾರಿಗಳಿಗೆ ಹೋಲಿಸಿದರೆ ಜವಾನರಿಗೆ ನೀಡುವ ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿದೆ. ಅವರು ಗ್ರಾಮೀಣ ಪ್ರದೇಶಗಳಿಂದ ಬಂದ ಕಾರಣ ಈ ರೀತಿಯ ವ್ಯವಸ್ಥೆಯಿದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು. ಹಾಗಾಗಿ ಮತ್ತೊಮ್ಮೆ ರಾಹುಲ್ ಗಾಂಧಿ ಟೀಕೆಗೆ ಒಳಪಟ್ಟರು.
-
The only “talk” to have with China is about restoration of ‘Status Quo Ante’ as of March 2020.
— Rahul Gandhi (@RahulGandhi) September 11, 2020 " class="align-text-top noRightClick twitterSection" data="
PM & GOI refuse to take responsibility for pushing China out of our land.
All other “talk” is worthless.
">The only “talk” to have with China is about restoration of ‘Status Quo Ante’ as of March 2020.
— Rahul Gandhi (@RahulGandhi) September 11, 2020
PM & GOI refuse to take responsibility for pushing China out of our land.
All other “talk” is worthless.The only “talk” to have with China is about restoration of ‘Status Quo Ante’ as of March 2020.
— Rahul Gandhi (@RahulGandhi) September 11, 2020
PM & GOI refuse to take responsibility for pushing China out of our land.
All other “talk” is worthless.
ಸಭೆಯಲ್ಲಿ ಹಲವರು ಲಡಾಖ್ ಪರಿಸ್ಥಿತಿಯ ಕುರಿತು ಧ್ವನಿ ಎತ್ತಿದರು. ಸಭೆಯ ನಂತರ ರಾಹುಲ್ ಗಾಂಧಿ ಭಾರತ-ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.