ಹಥ್ರಾಸ್ (ಉತ್ತರ ಪ್ರದೇಶ): ಬಹಳಷ್ಟು ಹೈಡ್ರಾಮಾ ಬಳಿಕ ಕೊನೆಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಹಥ್ರಾಸ್ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಸಂತ್ರಸ್ತೆಯ ಕುಟುಂಬದ ಸದಸ್ಯರ ಭೇಟಿ ಮಾಡಿದ್ದು, ಅವರಿಗೆ ಸಾಂತ್ವನ ಹೇಳಿದ್ದಾರೆ.
20 ವರ್ಷದ ದಲಿತ ಯುವತಿ ಹಥ್ರಾಸ್ನಲ್ಲಿ ಅತ್ಯಾಚಾರಕ್ಕೊಳಗಾಗಿ ಕಳೆದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದಳು. ಈ ಪ್ರಕರಣ ರಾಷ್ಟ್ರದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಎರಡು ದಿನಗಳ ಹಿಂದೆ ಪ್ರಯತ್ನಿಸಿ ವಿಫಲರಾಗಿದ್ದರು. ಆದರೆ, ಇಂದು ಉತ್ತರ ಪ್ರದೇಶ ಸರ್ಕಾರ ಕೇವಲ ಐವರಿಗೆ ಭೇಟಿ ಮಾಡಲು ಅವಕಾಶ ನೀಡಿದ್ದರು.
ಅದರಂತೆ ರಾಹುಲ್, ಪ್ರಿಯಾಂಕಾ ಸೇರಿ ಕಾಂಗ್ರೆಸ್ನ ಐವರು ಮುಖಂಡರು ಸಂತ್ರಸ್ತೆ ಕುಟುಂಬ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಸಂತ್ರಸ್ತೆ ಕುಟುಂಬ ಭೇಟಿಯಾದ ಬಳಿಕ ಮಾತನಾಡಿರುವ ಪ್ರಿಯಾಂಕಾ ಗಾಂಧಿ, ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಸಂತ್ರಸ್ತ ಯುವತಿ ಮೃತದೇಹವನ್ನ ಕೊನೆಯ ಬಾರಿ ನೋಡಲು ಕುಟುಂಬಸ್ಥರಿಗೆ ಅವಕಾಶ ನೀಡಿಲ್ಲ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ನ್ಯಾಯ ದೊರೆಯುವ ತನಕ ನಾವು ಈ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
-
The family couldn't see their daughter for the one last time. UP CM Yogi Adityanath should understand his responsibility. Till the time justice is delivered, we'll continue this fight: Congress' Priyanka Gandhi Vadra after meeting family of the alleged gangrape victim in Hathras pic.twitter.com/fpE41GSspM
— ANI UP (@ANINewsUP) October 3, 2020 " class="align-text-top noRightClick twitterSection" data="
">The family couldn't see their daughter for the one last time. UP CM Yogi Adityanath should understand his responsibility. Till the time justice is delivered, we'll continue this fight: Congress' Priyanka Gandhi Vadra after meeting family of the alleged gangrape victim in Hathras pic.twitter.com/fpE41GSspM
— ANI UP (@ANINewsUP) October 3, 2020The family couldn't see their daughter for the one last time. UP CM Yogi Adityanath should understand his responsibility. Till the time justice is delivered, we'll continue this fight: Congress' Priyanka Gandhi Vadra after meeting family of the alleged gangrape victim in Hathras pic.twitter.com/fpE41GSspM
— ANI UP (@ANINewsUP) October 3, 2020