ETV Bharat / bharat

ನವೆಂಬರ್​ ​ಮೊದಲ ವಾರದಲ್ಲಿ ಮತ್ತೆ 3 - 4 ರಫೇಲ್​​​​​​​​ ಜೆಟ್​​​ ಭಾರತಕ್ಕೆ!

ಭಾರತಕ್ಕೆ ಮುಂದಿನ ತಿಂಗಳು ಮತ್ತೊಂದು ಬ್ಯಾಚ್​ನ ಯುದ್ಧ ವಿಮಾನ ರಫೇಲ್ ಜೆಟ್​ ಆಗಮಿಸಲಿದ್ದು, ಈ ಮೂಲಕ ವಾಯುಪಡೆಗೆ ಮತ್ತಷ್ಟು ಆನೆಬಲ ಬರಲಿದೆ.

author img

By

Published : Oct 16, 2020, 6:47 PM IST

Rafale fighter jets
Rafale fighter jets

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಕಾರಣ ಈಗಾಗಲೇ ಫ್ರಾನ್ಸ್​​ನಿಂದ ಐದು ರಫೇಲ್​ ಜೆಟ್​ಗಳ ಮೊದಲ ಬ್ಯಾಚ್​ ಜುಲೈ 29ರಂದು ಭಾರತಕ್ಕೆ ಆಗಮಿಸಿ, ವಾಯುಸೇನೆ ಸೇರಿಕೊಂಡಿವೆ.

ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬ್ಯಾಚ್​ನ 3 - 4 ಹೊಸ ಯುದ್ಧ ವಿಮಾನಗಳಾದ ರಫೇಲ್​ ಫೈಟರ್​ ಜೆಟ್​​ ಭಾರತಕ್ಕೆ ನವೆಂಬರ್​ ತಿಂಗಳ ಮೊದಲ ವಾರದಲ್ಲಿ ಆಗಮಿಸಲಿವೆ. ಫ್ರಾನ್ಸ್​​ನೊಂದಿಗೆ 59 ಸಾವಿರ ಕೋಟಿ ರೂ ವೆಚ್ಚದಲ್ಲಿ ಒಟ್ಟು 36 ರಫೇಲ್​ ವಿಮಾನಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, 2023ರವೇಳಗೆ ಈ ಎಲ್ಲ ಯುದ್ಧ ವಿಮಾನಗಳು ಭಾರತದ ಬತ್ತಳಿಕೆ ಸೇರಿಕೊಳ್ಳಲಿವೆ.

ಹರಿಯಾಣದ ಅಂಬಾಲಾ ವಾಯುನೆಲೆಗೆ ಇವು ಬಂದು ಇಳಿಯಲಿದ್ದು, ಈಗಾಗಲೇ ಸಿದ್ಧತೆ ಆರಂಭಗೊಂಡಿದೆ. ಮೊದಲ ಬ್ಯಾಚ್​ನ ಯುದ್ಧ ವಿಮಾನಗಳನ್ನ ಈಗಾಗಲೇ ಲಡಾಖ್​​ನಲ್ಲಿ ನಿಯೋಜನೆ ಮಾಡಲಾಗಿದೆ. ಮೊದಲನೇ ಹಂತದ 10 ರಫೇಲ್​ಗಳ ಪೈಕಿ 5 ವಿಮಾನಗಳು ಫ್ರಾನ್ಸ್​​ನಲ್ಲಿದ್ದು, ಅಲ್ಲೇ ಭಾರತೀಯ ಪೈಲಟ್​ಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್​ ವೇಳೆಗೆ ಅವರ ತರಬೇತಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.