ಸಾತ್ನ (ಮಧ್ಯಪ್ರದೇಶ): ಶಾಲಾ ಕಟ್ಟಡದಲ್ಲಿ ಕ್ವಾರಂಟೈನ್ ಆಗಿದ್ದ ವಲಸೆ ಕಾರ್ಮಿಕರು ತಮ್ಮ ಬಿಡುವಿನ ಸಮಯ ಬಳಸಿಕೊಂಡು ಶಾಲೆಗೆ ಹೊಸ ರೂಪ ನೀಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೇರೆ ರಾಜ್ಯದಿಂದ ಬಂದು ತಮ್ಮ ಮನೆಗಳಿಗೆ ಮರಳುತ್ತಿದ್ದ ಅನೇಕ ಕಾರ್ಮಿಕರನ್ನು ಸಾತ್ನದ ಜಿಗನ್ಹಾಟ್ ಗ್ರಾಮದಲ್ಲಿರುವ ಶಾಲೆಯಲ್ಲಿ ಇರಿಸಲಾಗಿತ್ತು. ಬಿಡುವಿನಿಂದ ಬೇಸರಗೊಂಡಿದ್ದರಿಂದ ಕಾರ್ಮಿಕರು ಯಾವುದೇ ಕೆಲಸವಿಲ್ಲದ ಕಾರಣ ಹಳ್ಳಿಯ ಮುಖ್ಯಸ್ಥರಿಗೆ ಶಾಲೆಯ ಕಟ್ಟಡದ ಪೇಂಟಿಂಗ್ ಮಾಡುವುದಾಗಿ ಹೇಳಿದ್ದಾರೆ.
ಜಿಲ್ಲಾಡಳಿತದಿಂದ ಅನುಮತಿ ಪಡೆದ ಸರ್ಪಂಚ್, ಕಾರ್ಮಿಕರಿಗೆ ಕೆಲಸ ಮಾಡಲು ಅಗತ್ಯವಾದ ವಸ್ತುಗಳನ್ನು ಒದಗಿಸಿದ್ದಾರೆ. ಪಂಚಾಯತ್ ಇಚ್ಛೆಯಂತೆ ಶಾಲೆಗೆ ರೈಲಿನ ವಿನ್ಯಾಸ ನೀಡಲು ನಿರ್ಧರಿಸಿದರು. ಅಲ್ಲದೆ 'ವಂದೇ ಭಾರತ್ ಎಕ್ಸ್‌ಪ್ರೆಸ್ ಶಾಲೆ' ಎಂದು ಹೆಸರಿಟ್ಟಿದ್ದಾರೆ.
ನಮ್ಮ 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ, ಪೇಂಟಿಂಗ್ ಕೆಲಸ ಮಾಡಿದ್ದೇವೆ. ಶಾಲೆಯ ಕಟ್ಟಡಕ್ಕೆ ಒಂದು ಹೊಸ ರೂಪ ನೀಡಿದ್ದೇವೆ. ನಮ್ಮ ಬಿಡುವಿನ ಸಮಯವನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಂಡೆವು. ಈಗ ಶಾಲೆಯು ತುಂಬಾ ಚೆನ್ನಾಗಿ ಕಾಣುತ್ತಿದೆ ಎಂದು ಮುಂಬೈನಿಂದ ಹಿಂದಿರುಗಿದ ಕಾರ್ಮಿಕರೊಬ್ಬರು ಹೇಳಿದ್ದಾರೆ.