ETV Bharat / bharat

'ಭಾರತೀಯ ನೌಕಾದಳಕ್ಕೆ ಸದ್ಯಕ್ಕೆ ಯಾವುದೇ ಸವಾಲುಗಳಿಲ್ಲ':  ಈಟಿವಿ ಭಾರತದೊಂದಿಗೆ ನಿವೃತ್ತ ಅಧಿಕಾರಿ ಮಾತು

author img

By

Published : Oct 7, 2019, 5:19 PM IST

ಭಾರತೀಯ ನೌಕಾದಳದ ವಕ್ತಾರ ಡಿ.ಕೆ.ಶರ್ಮಾ ಭಾರತೀಯ ನೌಕಾದಳದ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಡಿ.ಕೆ. ಶರ್ಮಾ ಜೊತೆಗೆ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ನಡೆಸಿದ ಸಂದರ್ಶನ ಇಲ್ಲಿದೆ

ಭಾರತೀಯ ನೌಕಾದಳಕ್ಕೆ ಸದ್ಯಕ್ಕೆ ಯಾವುದೇ ಸವಾಲುಗಳಿಲ್ಲ

ನವದೆಹಲಿ: ಭಾರತ ಹಾಗೂ ಜಪಾನ್ ದೇಶಗಳ ನಡುವಿನ ಮಲಬಾರ್ ಸಮರಾಭ್ಯಾಸ ಇತ್ತೀಚೆಗೆ ಮುಕ್ತಾಯವಾಗಿದ್ದು, ಈ ಕುರಿತಂತೆ ಭಾರತೀಯ ನೌಕಾದಳದ ವಕ್ತಾರ ಡಿ.ಕೆ.ಶರ್ಮಾ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ನಿವೃತ್ತ ಕ್ಯಾಪ್ಟನ್​ ಡಿ.ಕೆ. ಶರ್ಮಾ ಜೊತೆಗೆ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ನಡೆಸಿದ ಸಂದರ್ಶನ ಇಲ್ಲಿದೆ...

ಪ್ರಶ್ನೆ: ಚೀನಾದಲ್ಲಿ ನಡೆದ 70ನೇ ರಾಷ್ಟ್ರೀಯ ದಿನದ ಮಿಲಿಟರಿ ಪ್ರದರ್ಶನದಿಂದ ರವಾನೆಯಾದ ಸಂದೇಶವೇನು...?

ಡಿ.ಕೆ.ಶರ್ಮ: ಚೀನಾ ಒಂದು ಸೂಪರ್​ ಪವರ್ ರಾಷ್ಟ್ರ. ಆಯಾ ದೇಶಗಳು ತಮ್ಮಲ್ಲಿರುವ ಮಿಲಿಟರಿ ಯುದ್ಧೋಪಕರಣಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತವೆ. ಮೂವತ್ತು ನಿಮಿಷ್ದದಲ್ಲಿ ಗುರಿಯನ್ನು ತಲುಪಬಲ್ಲ ಮಿಸೈಲ್​ ಎನ್ನುವ ವಿಚಾರವನ್ನು ಸಮಯ ಹಾಗೂ ಸಂದರ್ಭವೇ ನಿರ್ಧರಿಸಲಿದೆ. ಅಗ್ರರಾಷ್ಟ್ರಗಳು ಭದ್ರತೆ ವಿಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತವೆ.

ಪ್ರಶ್ನೆ: ಪ್ರಸ್ತುತ ಭಾರತವು ಅಮೆರಿಕದೊಂದಿಗೆ ಗುರುತಿಸಿಕೊಳ್ಳುತ್ತಿದೆಯಾ..?

ಡಿ.ಕೆ.ಶರ್ಮ: ಭಾರತ ಮೊದಲಿನಿಂದಲೂ ತಟಸ್ಥ ನೀತಿಯನ್ನೇ ಅನುಸರಿಸುತ್ತಿದೆ. ಸಮಯ ಹಾಗೂ ಸಂದರ್ಭವನ್ನು ಗಮನಿಸಿ ತನ್ನ ನಿಲುವು ಪ್ರದರ್ಶಿಸುತ್ತದೆ. ನಾವು ಯಾವುದೇ ರಾಷ್ಟ್ರದೊಂದಿಗೂ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ.

ಪ್ರಶ್ನೆ: ಇಂಡೋ-ಅಮೆರಿಕ ಸಮರಾಭ್ಯಾಸ ಇದೇ ವರ್ಷಾಂತ್ಯ ನಡೆಯಲಿದ್ದು, ಇದು ಎಷ್ಟು ಮಹತ್ವವಾಗಿದೆ..?

ಡಿ.ಕೆ.ಶರ್ಮ: ಇದೇ ನವೆಂಬರ್​​ನಲ್ಲಿ ಇಂಡೋ-ಅಮೆರಿಕ ಸಮರಾಭ್ಯಾಸ ನಡೆಯಲಿದೆ. ಉಭಯ ದೇಶಗಳ ಮುಂದಿನ ಮಿಲಿಟರಿ ಕ್ಷೇತ್ರ ಅಭಿವೃದ್ಧಿಗೆ ಇದು ಅತ್ಯಂತ ಪೂರಕ ಮತ್ತು ಮಹತ್ವದ್ದಾಗಿದೆ. ಇದರಲ್ಲಿ ಎರಡೂ ದೇಶಗಳು ಹಲವಾರು ವಿಚಾರಗಳನ್ನು ಕಲಿಯಲು ಅನುಕೂಲವಾಗಲಿದೆ.

ಪ್ರಶ್ನೆ: ಮಲಬಾರ್ ಸಮರಾಭ್ಯಾಸ ಇಷ್ಟೊಂದು ವರ್ಷಗಳಲ್ಲಿ ಯಾವ ರೀತಿ ಬೆಳದು ಬಂದಿದೆ..? ಇದರಿಂದ ರವಾನೆಯಾದ ಸಂದೇಶವೇನು..?

ಡಿ.ಕೆ.ಶರ್ಮ: ಮಲಬಾರ್ ಸಮರಾಭ್ಯಾಸ ಆರಂಭಗೊಂಡು ಎರಡು ದಶಕಗಳೇ ಕಳೆದಿವೆ. ಆರಂಭದಲ್ಲಿ ಅಮೆರಿಕ ನಮ್ಮೊಂದಿಗೆ ಸಮರಾಭ್ಯಾಸ ಮಾಡುತ್ತಿತ್ತು. ಅಮೆರಿಕದ ಕೆಲವು ಹಡಗುಗಳು ಬರುತ್ತಿದ್ದವು. ಆದರೆ ಅಮೆರಿಕದೊಂದಿಗೆ ನಾವು ಯಾವುದೇ ದ್ವಿಪಕ್ಷೀಯ ಮೈತ್ರಿ ಹೊಂದಿಲ್ಲ. ಭಾರತ ಸದ್ಯ ಮಿಲಿಟರಿಯಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಹೀಗಾಗಿ ಅಮೆರಿಕ ಸಹ ಭಾರತದ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿದೆ.

ಪ್ರಶ್ನೆ: ಅಮೆರಿಕ- ಭಾರತ ಹೊಂದಾಣಿಕೆ ಚೀನಾದ ಪ್ರಾಬಲ್ಯವನ್ನ ತಡೆಯುತ್ತಾ? ಈ ಬಗ್ಗೆ ಸಂದೇಶ ಹೋಗುತ್ತಾ

ಡಿ.ಕೆ.ಶರ್ಮ: ಕಡಲ್ಗಳ್ಳತನವನ್ನ ತಡೆಗಟ್ಟಲು ಎಲ್ಲರೂ ಜಲಾಂತರ್​ಗಾಮಿ ಹಾಗೂ ಸುಸಜ್ಜಿತ ನೌಕೆಗಳನ್ನ ಕಣ್ಗಾವಲು ಇಡುತ್ತವೆ. ಭಾರತವೂ ಇಂತಹ ಪ್ರಯತ್ನ ಮಾಡಿದೆ. ಇದು ಜಾಗತಿಕವಾಗಿ ಸರ್ವೇ ಸಾಮಾನ್ಯ. ಆದರೆ, ಆಯಾ ಜಲರೇಖೆಗಳ ನಿಯಮಗಳನ್ನ ಎಲ್ಲ ರಾಷ್ಟ್ರಗಳು ಗಮನದಲ್ಲಿಟ್ಟುಕೊಳ್ಳಬೇಕು. ಚೀನಾ ಈ ನಿಯಮಗಳನ್ನ ಬಹಳಷ್ಟು ಸಲ ಗಾಳಿಗೆ ತೂರಿದೆ.

ಪ್ರಶ್ನೆ: ಭಾರತೀಯ ಸಮುದ್ರದಲ್ಲಿ ಭಾರತದ ಮುಂದಿರುವ ಬಹುದೊಡ್ಡ ಸವಾಲು ಏನು..?

ಡಿ.ಕೆ.ಶರ್ಮ: ನಮಗೆ ಯಾವುದೇ ಸವಾಲುಗಳಿಲ್ಲ. ನಾವು ಉತ್ತಮ ತಂತ್ರಜ್ಞಾನವನ್ನು ಹೊಂದಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ವಿಪತ್ತು ಎದುರಾದರೂ ಭಾರತೀಯ ನೌಕಾದಳ ಪ್ರಥಮವಾಗಿ ಸ್ಪಂದಿಸುತ್ತಿದೆ. ಇದಲ್ಲದೆ ನೆರೆಯ ದೇಶಗಳಾದ ಶ್ರೀಲಂಕಾ, ಮಡಗಾಸ್ಕರ್, ಮಾಲ್ಡೀವ್ಸ್, ಸೇಚೆಲ್ಸ್, ಮಾರಿಷಸ್, ಬಾಂಗ್ಲಾದೇಶ, ಮ್ಯಾನ್ಮಾರ್​​ಗಳಿಗೂ ನಮ್ಮ ನೌಕಾದಳ ಸಹಾಯ ಹಸ್ತ ಚಾಚಿದೆ.

Intro:Body:

ನವದೆಹಲಿ: ಭಾರತ ಹಾಗೂ ಜಪಾನ್ ದೇಶಗಳ ನಡುವಿನ ಮಲಬಾರ್ ಸಮರಾಭ್ಯಾಸ ಇತ್ತೀಚೆಗೆ ಮುಕ್ತಾಯವಾಗಿದ್ದು, ಈ ಕುರಿತಂತೆ ಹಿರಿಯ ಭಾರತೀಯ ನೌಕಾದಳದ ವಕ್ತಾರ ಡಿ.ಕೆ.ಶರ್ಮಾ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಡಿ.ಕೆ. ಶರ್ಮಾ ಜೊತೆಗೆ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ನಡೆಸಿದ ಸಂದರ್ಶನ ಇಲ್ಲಿದೆ...

ಪ್ರಶ್ನೆ: ಚೀನಾದಲ್ಲಿ ನಡೆದ 70ನೇ ರಾಷ್ಟ್ರೀಯ ದಿನದ ಮಿಲಿಟರಿ ಪ್ರದರ್ಶನದಿಂದ ರವಾನೆಯಾದ ಸಂದೇಶವೇನು...?

ಡಿ.ಕೆ.ಶರ್ಮ: ಚೀನಾ ಒಂದು ಸೂಪರ್​ ಪವರ್ ರಾಷ್ಟ್ರ. ಆಯಾ ದೇಶಗಳು ತಮ್ಮಲ್ಲಿರುವ ಮಿಲಿಟರಿ ಯುದ್ಧೋಪಕರಣಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತವೆ. ಮೂವತ್ತು ನಿಮಿಷ್ದದಲ್ಲಿ ಗುರಿಯನ್ನು ತಲುಪಬಲ್ಲ ಮಿಸೈಲ್​ ಎನ್ನುವ ವಿಚಾರವನ್ನು ಸಮಯ ಹಾಗೂ ಸಂದರ್ಭವೇ ನಿರ್ಧರಿಸಲಿದೆ. ಅಗ್ರರಾಷ್ಟ್ರಗಳು ಭದ್ರತೆ ವಿಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತವೆ.

ಪ್ರಶ್ನೆ: ಪ್ರಸ್ತುತ ಭಾರತವು ಅಮೆರಿಕದೊಂದಿಗೆ ಗುರುತಿಸಿಕೊಳ್ಳುತ್ತಿದೆಯಾ..?

ಡಿ.ಕೆ.ಶರ್ಮ: ಭಾರತ ಮೊದಲಿನಿಂದಲೂ ತಟಸ್ಥ ನೀತಿಯನ್ನೇ ಅನುಸರಿಸುತ್ತಿದೆ. ಸಮಯ ಹಾಗೂ ಸಂದರ್ಭವನ್ನು ಗಮನಿಸಿ ತನ್ನ ನಿಲುವು ಪ್ರದರ್ಶಿಸುತ್ತದೆ. ನಾವು ಯಾವುದೇ ರಾಷ್ಟ್ರದೊಂದಿಗೂ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ.

ಪ್ರಶ್ನೆ: ಇಂಡೋ-ಅಮೆರಿಕ  ಸಮರಾಭ್ಯಾಸ ಇದೇ ವರ್ಷಾಂತ್ಯ ನಡೆಯಲಿದ್ದು, ಇದು ಎಷ್ಟು ಮಹತ್ವವಾಗಿದೆ..?

ಡಿ.ಕೆ.ಶರ್ಮ: ಇದೇ ನವೆಂಬರ್​​ನಲ್ಲಿ ಇಂಡೋ-ಅಮೆರಿಕ  ಸಮರಾಭ್ಯಾಸ ನಡೆಯಲಿದೆ. ಉಭಯ ದೇಶಗಳ ಮುಂದಿನ ಮಿಲಿಟರಿ ಕ್ಷೇತ್ರ ಅಭಿವೃದ್ಧಿಗೆ ಇದು ಅತ್ಯಂತ ಪೂರಕ ಮತ್ತು ಮಹತ್ವದ್ದಾಗಿದೆ. ಇದರಲ್ಲಿ ಎರಡೂ ದೇಶಗಳು ಹಲವಾರು ವಿಚಾರಗಳನ್ನು ಕಲಿಯಲು ಅನುಕೂಲವಾಗಲಿದೆ.

ಪ್ರಶ್ನೆ: ಮಲಬಾರ್ ಸಮರಾಭ್ಯಾಸ ಇಷ್ಟೊಂದು ವರ್ಷಗಳಲ್ಲಿ ಯಾವ ರೀತಿ ಬೆಳದು ಬಂದಿದೆ..? ಇದರಿಂದ ರವಾನೆಯಾದ ಸಂದೇಶವೇನು..?

ಡಿ.ಕೆ.ಶರ್ಮ: ಮಲಬಾರ್ ಸಮರಾಭ್ಯಾಸ ಆರಂಭಗೊಂಡು ಎರಡು ದಶಕಗಳೇ ಕಳೆದಿವೆ. ಆರಂಭದಲ್ಲಿ ಅಮೆರಿಕ

ನಮ್ಮೊಂದಿಗೆ ಸಮರಾಭ್ಯಾಸ ಮಾಡುತ್ತಿತ್ತು. ಅಮೆರಿಕದ ಕೆಲವು  ಹಡಗುಗಳು ಬರುತ್ತಿದ್ದವು. ಆದರೆ ಅಮೆರಿಕದೊಂದಿಗೆ ನಾವು ಯಾವುದೇ ದ್ವಿಪಕ್ಷೀಯ ಮೈತ್ರಿ ಹೊಂದಿಲ್ಲ. ಭಾರತ ಸದ್ಯ ಮಿಲಿಟರಿಯಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು ಹೀಗಾಗಿ ಅಮೆರಿಕ ಸಹ ಭಾರತದ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿದೆ.

ಪ್ರಶ್ನೆ: ಭಾರತೀಯ ಸಮುದ್ರದಲ್ಲಿ ಭಾರತದ ಮುಂದಿರುವ ಬಹುದೊಡ್ಡ ಸವಾಲು ಏನು..?

ಡಿ.ಕೆ.ಶರ್ಮ: ನಮಗೆ ಯಾವುದೇ ಸವಾಲುಗಳಿಲ್ಲ. ನಾವು ಉತ್ತಮ ತಂತ್ರಜ್ಞಾನವನ್ನು ಹೊಂದಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ವಿಪತ್ತು ಎದುರಾದರೂ ಭಾರತೀಯ ನೌಕಾದಳ ಪ್ರಥಮವಾಗಿ ಸ್ಪಂದಿಸುತ್ತಿದೆ. ಇದಲ್ಲದೆ ನೆರೆಯ ದೇಶಗಳಾದ ಶ್ರೀಲಂಕಾ, ಮಡಗಾಸ್ಕರ್, ಮಾಲ್ಡೀವ್ಸ್, ಸೇಚೆಲ್ಸ್, ಮಾರಿಷಸ್, ಬಾಂಗ್ಲಾದೇಶ, ಮ್ಯಾನ್ಮಾರ್​​ಗಳಿಗೂ ನಮ್ಮ ನೌಕಾದಳ ಸಹಾಯ ಹಸ್ತ ಚಾಚಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.