ಅಮೃತಸರ (ಪಂಜಾಬ್) : 243 ಕೆನಡಿಯನ್ನರನ್ನು ಹೊತ್ತ ಕತಾರ್ ಏರ್‌ವೇಸ್‌ನ ವಿಶೇಷ ವಿಮಾನ ಬುಧವಾರ ಬೆಳಗ್ಗೆ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆನಡಾಗೆ ಪ್ರಯಾಣ ಬೆಳೆಸಿತು.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡ ರಾಜ್ಯ ಮುಖ್ಯ ಕಾರ್ಯದರ್ಶಿ ಕೆಬಿಎಸ್ ಸಿಧು, ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಏರ್ವೇಸ್ಗೆ ಸೇರಿದ ವಿಶೇಷ ವಿಮಾನವು 243 ಕೆನಡಿಯನ್ನರನ್ನು ಹೊತ್ತು ಪ್ರಯಾಣ ಬೆಳೆಸಿದೆ. ಈ ವಿಮಾನವು ದೋಹ ಮೂಲಕ ಕೆನಡಾದ ಮಾಂಟ್ರಿಯಲ್ಗೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ವಿಮಾನ ಸೇವೆಗಳು ಸ್ಥಗಿತಗೊಂಡು ಸಾವಿರಾರು ವಿದೇಶಿ ಪ್ರವಾಸಿಗರು ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರೆಲ್ಲರನ್ನು ಹಂತ ಹಂತವಾಗಿ ವಿಶೇಷ ವಿಮಾನದ ಮೂಲಕ ಅವರ ದೇಶಗಳಿಗೆ ಕಳಿಸಲಾಗುತ್ತಿದೆ.