ಅಮೃತ್ಸರ್ (ಪಂಜಾಬ್): ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆಶ್ರಮವೊಂದರ ಇಬ್ಬರು ಮುಖ್ಯಸ್ಥರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ದಾಳಿಯ ಬಳಿಕ 25 ಮತ್ತು 40 ವರ್ಷ ವಯಸ್ಸಿನ ಮಹಿಳೆಯರನ್ನು ಆಶ್ರಮದಿಂದ ರಕ್ಷಿಸಲಾಗಿದೆ.
ಈ ಹಿಂದೆ ಆಶ್ರಮದ ಇಬ್ಬರು ಶಿಷ್ಯರಾದ ಸೂರಜ್ ನಾಥ್ ಮತ್ತು ನಾಚ್ತಾರ್ ನಾಥ್ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದರು. ಈ ಕುರಿತು ಆಶ್ರಮದ ಮುಖ್ಯಸ್ಥರಾದ ಗಿರ್ದಾರಿ ನಾಥ್ ಮತ್ತು ವರೀಂದರ್ ನಾಥ್ ಎಂಬುವರಿಗೆ ದೂರು ನೀಡಲು ಮಹಿಳೆಯರು ಆಶ್ರಮಕ್ಕೆ ತೆರಳಿದ್ದರು. ಆದರೆ ಮುಖ್ಯಸ್ಥರು ಕೂಡಾ ಅದೇ ರೀತಿಯ ಕೃತ್ಯವೆಗಿದ್ದಾರೆ ಎಂದು ಸಂತ್ರಸ್ತೆಯರು ಆರೋಪಿಸಿದ್ದಾರೆ.
ದೂರು ಸ್ವೀಕರಿಸಿದ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಗುರ್‌ಪ್ರತಾಪ್ ಸಿಂಗ್ ಸಹೋಟಾ ತಿಳಿಸಿದ್ದಾರೆ.