ಚಂಡೀಗಡ: ಕೊರೊನಾ ವೈರಸ್ ಕುರಿತಾದ ಮಾಹಿತಿಯನ್ನು ಜನರಿಗೆ ತಲುಪಿಸಲು ಪಂಜಾಬ್ ಸರ್ಕಾರ ಫೇಸ್‌ಬುಕ್ ಸಹಯೋಗದೊಂದಿಗೆ ಚಾಟ್‌ಬಾಟ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.
ಫೇಸ್‌ಬುಕ್ ಪೇಜ್ "https://www.facebook.com/PunjabGovtIndia"ನಲ್ಲಿ ಚಾಟ್‌ಬಾಟ್ ಲಭ್ಯವಿದೆ. ಈ ಪೇಜ್ನಲ್ಲಿರುವ ಮೆಸೇಜ್ ಬಟನ್ ಕ್ಲಿಕ್ ಮಾಡಿದರೆ ಚಾಟ್‌ಬಾಟ್ ಪ್ರವೇಶಿಸಬಹುದು. ಅಷ್ಟೇ ಅಲ್ಲದೆ ಕ್ಯೂಆರ್(QR Code)ನ್ನು ಸ್ಕ್ಯಾನ್ ಮಾಡುವ ಮೂಲಕವೂ ಚಾಟ್‌ಬಾಟ್ ತೆರೆಯಬಹುದು.
ಆರಂಭಿಕ ಸಂವಾದದಲ್ಲಿ ಮೂರು ಆಯ್ಕೆಗಳಿವೆ. ಅವುಗಳೆಂದರೆ COVID-19 ಮಾಹಿತಿ, ಅಗತ್ಯ ವಸ್ತುಗಳ ಅಂಗಡಿಗಳು ಮತ್ತು ಭಾಷೆ ಬದಲಾಯಿಸುವುದು. ಇನ್ನು ಈ ಆ್ಯಪ್ ಪಂಜಾಬಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ.