ETV Bharat / bharat

ಹರಸಾಹಸಪಟ್ಟು ಹಿಡಿದ ಕಳ್ಳನಿಗೆ ಕೊರೊನಾ ಪಾಸಿಟಿವ್‌: ಜಡ್ಜ್‌, ಪೊಲೀಸರು ಸೇರಿ 10 ಮಂದಿಗೆ ಕ್ವಾರಂಟೈನ್!

ಕಳೆದ ಕೆಲ ದಿನಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಇಬ್ಬರು ಕಳ್ಳರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅವರನ್ನು ಹಿಡಿದ ಪೊಲೀಸರು ಮಾರಕ ಸೋಂಕು ಆತಂಕದಲ್ಲಿದ್ದಾರೆ.

COVID-19
COVID-19
author img

By

Published : Apr 10, 2020, 4:17 PM IST

ಲೂಧಿಯಾನ್ ​(ಪಂಜಾಬ್​): ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಸಾಹಸಪಟ್ಟು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು ಇದೀಗ ಸಂಕಷ್ಟಕ್ಕೊಳಗಾದ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ.

ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ಮೂಲಕ ಹಿಡಿದಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ವೇಳೆ ವಿಪರೀತವಾಗಿ ಕೆಮ್ಮುತ್ತಿದ್ದರು. ಇದನ್ನು ಗಮನಿಸಿದ ನ್ಯಾಯಾಧೀಶರು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಕೋವಿಡ್​ ಟೆಸ್ಟ್​ ಮಾಡಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಆಸ್ಪತ್ರೆಯಲ್ಲಿ ನಡೆಸಲಾದ ಪರೀಕ್ಷೆಯ ವೇಳೆ ಕಳ್ಳರಿಬ್ಬರಿಗೆ ಕೊರೊನಾ ಇರುವುದು ಕನ್ಫರ್ಮ್​ ಆಗಿದೆ. ಇನ್ನು ಟೆಸ್ಟ್​ ಮಾಡಿಸಿಕೊಳ್ಳುತ್ತಿದ್ದ ವೇಳೆ ಓರ್ವ ಕಳ್ಳ ಪರಾರಿಯಾಗಿದ್ದಾನೆ.

ಪರಿಣಾಮ, 7 ಮಂದಿ ಪೊಲೀಸ್ ಸಿಬ್ಬಂದಿ, ಓರ್ವ ಜಡ್ಜ್​ ಹಾಗೂ ಮತ್ತೋರ್ವ ಕಳ್ಳ ಸೇರಿ ಒಟ್ಟು 10 ಮಂದಿಯನ್ನು ಕ್ವಾರಂಟೈನ್​​ನಲ್ಲಿ ಇಡಲಾಗಿದೆ.

ಚೈನ್​ ಸ್ನ್ಯಾಚರ್​ ಆಗಿದ್ದ ಈ ಇಬ್ಬರು ಕಳೆದ ಮೂರು ದಿನಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. ತಪ್ಪಿಸಿಕೊಂಡಿರುವ ಕಳ್ಳನಿಗಾಗಿ ಈಗಾಗಲೇ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪಂಜಾಬ್​​ನಲ್ಲಿ 130 ಕೋವಿಡ್​​-19 ಕೇಸ್​ ಕಂಡು ಬಂದಿದ್ದು, 11 ಜನರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.