ETV Bharat / bharat

NEET ಪರೀಕ್ಷೆ ಬರೆಯಲು ಜಾಮೀನು ಕೋರಿ ಕೋರ್ಟ್​​ ಮೆಟ್ಟಿಲೇರಿದ ಪುಲ್ವಾಮಾ ದಾಳಿಕೋರ - 2019ರಲ್ಲಿ ನಡೆದ ಪುಲ್ವಾಮಾ ದಾಳಿ

2019ರಲ್ಲಿ ನಡೆದ ಪುಲ್ವಾಮಾ ದಾಳಿಯ ಪ್ರಮುಖ ಆರೋಪಿಯೋರ್ವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಬರೆಯಲು ಅನುಮತಿ ಕೇಳಿ ಕೋರ್ಟ್​ ಮೊರೆ ಹೋಗಿದ್ದಾನೆ.

Pulwama terror attack
Pulwama terror attack
author img

By

Published : Sep 1, 2020, 7:44 PM IST

ಜಮ್ಮು(ಜಮ್ಮು-ಕಾಶ್ಮೀರ): ಪುಲ್ವಾಮಾ ದಾಳಿಕೋರ ವಾಜಿ ಉಲ್​​ ಇಸ್ಲಾಂ ಇದೀಗ ನೀಟ್(ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಬರೆಯಲು ಜಾಮೀನು ನೀಡುವಂತೆ ಕೋರಿ ಎನ್​ಐಎ ವಿಶೇಷ ಕೋರ್ಟ್​ ಮೊರೆ ಹೋಗಿದ್ದಾರೆ.

2019ರ ಫೆಬ್ರವರಿ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ವಾಜಿ ಉಲ್​ ಇಸ್ಲಾಂ ಆನ್​ಲೈನ್​​ ಮೂಲಕ ಸ್ಫೋಟಕ ವಸ್ತು ಖರೀದಿ ಮಾಡಿದ್ದನು. ಸದ್ಯ ತನಗೆ ಜಾಮೀನು ನೀಡುವಂತೆ ಕೋರ್ಟ್​ ಬಳಿ ಮೊರೆ ಇಟ್ಟಿದ್ದಾರೆ. ಇದರ ವಿಚಾರಣೆ ಸೆಪ್ಟೆಂಬರ್​ 3ರಂದು ನಡೆಯಲಿದೆ. ಪುಲ್ವಾಮಾ ದಾಳಿ ಪ್ರಕರಣ ಕುರಿತಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್​ಐಎ) ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದು, ದಾಳಿಯ ಹಿಂದೆ ಮೋಸ್ಟ್​​ ವಾಂಟೆಂಡ್​​ ಉಗ್ರ ಅಜರ್​​​ ಮಸೂದ್​ ಕೈವಾಡವಿದೆ ಎಂದು ಹೇಳಿದೆ. ಜತೆಗೆ 18 ಉಗ್ರರ ಹೆಸರು ಕೋರ್ಟ್​ಗೆ ಸಲ್ಲಿಕೆ ಮಾಡಿದೆ.

ಭಯೋತ್ಪಾದಕ ದಾಳಿ ವೇಳೆ ಸಿಆರ್​​ಪಿಎಫ್​ನ 40 ಯೋಧರು ಹುತಾತ್ಮರಾಗಿದ್ದರು. ಜಮ್ಮು ನ್ಯಾಯಾಲಯಕ್ಕೆ ಸುಮಾರು 5 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದ್ದು, ಸಿಆರ್​​ಪಿಎಫ್​​ ಪಡೆ ಮೇಲೆ ಭಯೋತ್ಪಾದಕ ದಾಳಿ ನಡೆದು 18 ತಿಂಗಳ ಬಳಿಕ ವರದಿ ಸಲ್ಲಿಕೆಯಾಗಿದೆ. ದಾಳಿ ನಡೆಯಲು ಮುಖ್ಯವಾಗಿ ಮಸೂದ್​ ಅಜರ್​ ಪ್ರಮುಖ ರೂವಾರಿ ಎಂದು ಇದರಲ್ಲಿ ಉಲ್ಲೇಖ ಮಾಡಲಾಗಿದೆ. ಉಳಿದಂತೆ ಇವರ ಸಹೋದರ ಅಬ್ದುಲ್​ ಅಸ್ಗರ್​​​,ಅಮರ್​ ಅಲ್ವಿ ಹಾಗೂ ಸೋದರಳಿಯ ಉಮರ್​​ ಫಾರೂಖ್​​​ ಹೆಸರು ಇದೆ. ಇನ್ನು ವಾಜಿ ಉಲ್​​ ಇಸ್ಲಾಂ ಕೂಡ ಸ್ಫೋಟಕ ವಸ್ತು ಖರೀದಿ ಮಾಡಿ ದಾಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದನು ಎಂದು ಎನ್​​ಐಎ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.