ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 36ನೇ ಪುಣ್ಯತಿಥಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗೌರವ ಸಲ್ಲಿಸಿದರು.
-
Tributes to our former PM Smt. Indira Gandhi Ji on her death anniversary.
— Narendra Modi (@narendramodi) October 31, 2020 " class="align-text-top noRightClick twitterSection" data="
">Tributes to our former PM Smt. Indira Gandhi Ji on her death anniversary.
— Narendra Modi (@narendramodi) October 31, 2020Tributes to our former PM Smt. Indira Gandhi Ji on her death anniversary.
— Narendra Modi (@narendramodi) October 31, 2020
"ನಮ್ಮ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಜೀ ಅವರ ಪುಣ್ಯತಿಥಿಯಂದು ಅವರಿಗೆ ನಮನ" ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ. ಕಳೆದ ಭಾನುವಾರವೂ ಸಹ ತಮ್ಮ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ "ಅಕ್ಟೋಬರ್ 31ರಂದು ನಾವು ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯನ್ನು ಕಳೆದುಕೊಂಡೆವು. ನಾನು ಅವರಿಗೆ ಗೌರವಯುತವಾಗಿ ನಮನ ಸಲ್ಲಿಸುತ್ತೇನೆ" ಎಂದು ಹೇಳಿದ್ದರು.
ಇಂದಿರಾ ಗಾಂಧಿ ಅವರ ಮೊಮ್ಮಗಳಾಗಿರುವ ಕೈ ನಾಯಕಿ ಪ್ರಿಯಾಂಕಾ ಗಾಂಧಿ, ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
-
asato mā sadgamaya
— Rahul Gandhi (@RahulGandhi) October 31, 2020 " class="align-text-top noRightClick twitterSection" data="
tamaso mā jyotirgamaya
mṛtyor mā amṛtaṃ gamaya
From the false to truth.
From darkness to light.
From death to life.
Thank you Dadi for showing me what it means to live these words. pic.twitter.com/PBvEeXotew
">asato mā sadgamaya
— Rahul Gandhi (@RahulGandhi) October 31, 2020
tamaso mā jyotirgamaya
mṛtyor mā amṛtaṃ gamaya
From the false to truth.
From darkness to light.
From death to life.
Thank you Dadi for showing me what it means to live these words. pic.twitter.com/PBvEeXotewasato mā sadgamaya
— Rahul Gandhi (@RahulGandhi) October 31, 2020
tamaso mā jyotirgamaya
mṛtyor mā amṛtaṃ gamaya
From the false to truth.
From darkness to light.
From death to life.
Thank you Dadi for showing me what it means to live these words. pic.twitter.com/PBvEeXotew
ಇಂದಿರಾ ಗಾಂಧಿ ಅವರ ಮೊಮ್ಮಗ ರಾಹುಲ್ ಗಾಂಧಿ ಅಜ್ಜಿಯ ಫೋಟೋವೊಂದನ್ನು ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ. "ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ.. (ಸುಳ್ಳಿನಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಸಾವಿನಿಂದ ಜೀವನದೆಡೆಗೆ) ಈ ಪದಗಳ ಅರ್ಥದೊಂದಿಗೆ ಜೀವಿಸುವುದನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ದಾದಿ" ಎಂದು ರಾಗಾ ಹೇಳಿದ್ದಾರೆ.
ಇಂದಿರಾ ಗಾಂಧಿ ಅವರು ಭಾರತದ ಮೊದಲ ಹಾಗೂ ದೀರ್ಘ ಕಾಲ (1966-1977, 1980-1984) ದೇಶವನ್ನಾಳಿದ ಮಹಿಳಾ ಪ್ರಧಾನಿಯಾಗಿದ್ದಾರೆ. 1984ರ ಅಕ್ಟೋಬರ್ 31ರಂದು ಅಕ್ಬರ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಅವರ ಅಂಗರಕ್ಷಕರಿಂದಲೇ ಹತ್ಯೆಗೀಡಾಗಿದ್ದರು.