ವಾರಣಾಸಿ: ಯುಪಿ ಪೂರ್ವದ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೋಣಿಗಾರನ ಮಗಳ ಮದುವೆಗೆ ಶುಭ ಕೋರಿ, ಉಡುಗೊರೆ ಕಳುಹಿಸಿದ್ದಾರೆ.
ಜನವರಿ 10 ರಂದು ಉತ್ತರಪ್ರದೇಶಕ್ಕೆ ಬರುವಾಗ ಪ್ರಿಯಾಂಕ ಗಾಂಧಿ ಅಶೋಕ್ ಸಾಹ್ನಿ ಇವರ ದೋಣಿಯಲ್ಲಿ ವಿಹರಿಸಿದ್ದರು.
ಈ ಹಿನ್ನೆಲೆ ಬೋಟ್ ಮ್ಯಾನ್ ಅಶೋಕ್ ಸಾಹ್ನಿ ಮಗಳ ಮದುವೆಗೆ ಅವರನ್ನು ಆಹ್ವಾನಿಸಿದ್ರು. ಹೀಗಾಗಿ ಪ್ರಿಯಾಂಕಾ ಗಾಂಧಿ ಮದುವೆ ಶುಭಕೋರಿ, ಗಿಫ್ಟ್ ಕೂಡ ಕಳುಹಿಸಿದ್ದಾರೆ.