ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣದ ಜವಾಬ್ದಾರಿ ಹೊತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡುವಂತೆ ಆಗ್ರಹ ಮಾಡಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ, ಯೋಗಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಾಲಕಿ ಮೇಲೆ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರ ಪ್ರಕರಣ ಅಮಾನವೀಯವಾಗಿದ್ದು, ಯಾರಿಗೂ ಗೊತ್ತಿಲ್ಲದಂತೆ ಮೃತದೇಹ ದಹನ ಮಾಡಿರುವುದು ಅಲ್ಲಿನ ಸರ್ಕಾರದ ವೈಫಲ್ಯತೆ ಎತ್ತಿ ತೋರಿಸಿದೆ ಎಂದಿದ್ದಾರೆ.
ಹತ್ರಾಸ್ ಕೇಸ್ ಮಾಸುವ ಮೊದಲೇ ಮತ್ತೊಂದು ಕೃತ್ಯ: ಯುಪಿಯಲ್ಲಿ ಅತ್ಯಾಚಾರವೆಸಗಿ ವಿದ್ಯಾರ್ಥಿನಿ ಕೊಲೆ!
ರಾಜ್ಯದಲ್ಲಿ ಅಮಾನವೀಯ ಕೃತ್ಯಗಳು ನಡೆಯುತ್ತಿರುವುದು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆ ಉಂಟಾಗಿದ್ದು, ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲು ಮಾಡದೇ ಇರುವುದಕ್ಕೆ ಏನು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ.
ಕೊನೆಯ ಬಾರಿಗೆ ತಮ್ಮ ಮಗಳ ದೇಹ ನೋಡಲು ಅವಕಾಶ ನೀಡಿಲ್ಲ. ಸಂತ್ರಸ್ತೆ ಕುಟುಂಬವನ್ನ ಗೃಹ ಬಂಧನದಲ್ಲಿಡಲಾಗಿದೆ. ಇದರ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.