ನವದೆಹಲಿ: ಇಂದು 70ನೇ ಸಂವಿಧಾನ ದಿನದ ಹಿನ್ನೆಲೆಯಲ್ಲಿ ಸಂಸತ್ನಲ್ಲಿ ಇಂದು ವಿಶೇಷ ಜಂಟಿ ಅಧಿವೇಶನ ನಡೆಯಿತು. ಈ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಸಂವಿಧಾನದ ಮಹತ್ವವನ್ನು ಸಾರಿದರು.
ಭಾರತದ ಸಂವಿಧಾನವು ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ಸಭೆಯನ್ನುದ್ದೇಶಿಸಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಜೆಗಳ ಹಕ್ಕು ಮತ್ತು ಕರ್ತವ್ಯ ನಮ್ಮ ಸಂವಿಧಾನದ ವಿಶೇಷ ಅಂಶವಾಗಿದೆ. ಸಂವಿಧಾನದಲ್ಲಿ ಉಲ್ಲೇಖಿಸಲಾದ ಕರ್ತವ್ಯಗಳನ್ನು ನಾವು ಹೇಗೆ ಪೂರೈಸಬಹುದು ಎಂಬುದರ ಕುರಿತು ಯೋಚಿಸಬೇಕಿದೆ ಎಂದು ಪಿಎಂ ಮೋದಿ ತಿಳಿಸಿದರು.