ETV Bharat / bharat

80 ಕೋಟಿ ಜನರಿಗೆ ನವೆಂಬರ್​ವರೆಗೂ ಅಕ್ಕಿ-ಬೇಳೆ ಉಚಿತ​: ಮೋದಿ ಭಾಷಣದ ಮುಖ್ಯಾಂಶಗಳು - ಕೋವಿಡ್​-19

ಇಂದು ಸಂಜೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಬಡವರಿಗಾಗಿ ಗರೀಬ್ ಕಲ್ಯಾಣ್​ ಅನ್ನ ಯೋಜನೆ ವಿಸ್ತರಣೆ ಬಗ್ಗೆ ಘೋಷಿಸಿದ್ದಾರೆ. ಇನ್ನುಳಿದಂತೆ ಭಾಷಣದ ಪೂರ್ಣ ವಿವರ ಇಲ್ಲಿದೆ.

Prime Minister Narendra Modi
Prime Minister Narendra Modi
author img

By

Published : Jun 30, 2020, 4:53 PM IST

Updated : Jun 30, 2020, 4:59 PM IST

ನವದೆಹಲಿ: ಕೊರೊನಾ ವಿರುದ್ಧದ ಹೋರಾಟದೊಂದಿಗೆ ನಾವು ಅನ್​ಲಾಕ್​ 2.0 ಪ್ರವೇಶ ಪಡೆದುಕೊಂಡಿದ್ದೇವೆ. ಆತ್ಮ ನಿರ್ಭರ ಭಾರತಕ್ಕಾಗಿ ಹಗಲು-ರಾತ್ರಿ ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಕರೆ ನೀಡಿದರು.

ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬೇರೆ ದೇಶಗಳಲ್ಲಿನ ಕೊರೊನಾ ಸೋಂಕು ಪ್ರಮಾಣ ಹಾಗೂ ಸಾವಿನ ಸಂಖ್ಯೆ ನೋಡಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ದೇಶದಲ್ಲಿ ಅನ್​ಲಾಕ್​ 1.o ಜಾರಿಯಾದಾಗಿನಿಂದಲೂ ಸೋಂಕಿತ ಪ್ರಕರಣ ಹೆಚ್ಚಾಗಿದ್ದು, ಕಂಟೇನ್ಮೆಂಟ್ ಪ್ರದೇಶದಲ್ಲಿ ಜನರು ಹೆಚ್ಚು ಎಚ್ಚರದಿಂದಿರಬೇಕು ಎಂದು ಸೂಚನೆ ನೀಡಿದರು.

ನಮೋ ಭಾಷಣ

ಸೂಕ್ತ ಸಮಯದಲ್ಲಿ ಲಾಕ್​ಡೌನ್​ ಜಾರಿ ಮಾಡಿದ್ದರಿಂದ ಸಾವಿರಾರು ಜನರ ಪ್ರಾಣ ಉಳಿದಿದೆ. ಇಂತಹ ದೊಡ್ಡ ದೇಶದಲ್ಲಿ ಬಡವರು ಕೊರೊನಾ ಕಾರಣ ಉಪವಾಸ ಮಲಗಿಲ್ಲ. ದೇಶದಲ್ಲಿ ಲಾಕ್​ಡೌನ್​ ಜಾರಿಯಾಗುತ್ತಿದ್ದಂತೆ ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆ ಜಾರಿ ಮಾಡಲಾಗಿತ್ತು. ಇದರಿಂದ ದೇಶದ ಬಡವರಿಗೆ ಅನುಕೂಲವಾಗಿದೆ.

ಬಡವರು, ಅಗತ್ಯವಿರುವ ಜನರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಲಾಗಿದ್ದು ದೇಶದ ಎಲ್ಲರಿಗೂ ಒಂದೇ ರೇಷನ್​ ಕಾರ್ಡ್​ ಕೊಡುವ ಯೋಜನೆ ಶೀಘ್ರ ಜಾರಿಗೊಳ್ಳಲಿದೆ ಎಂದು ಮೋದಿ ತಿಳಿಸಿದರು. ದೇಶದ ಜನರಿಗಾಗಿ ಕೇಂದ್ರ ಸರ್ಕಾರ ಶ್ರಮವಹಿಸುತ್ತಿದೆ. ನಮ್ಮೊಂದಿಗೆ ಸಹಕಾರ ನೀಡಿ, ಮಾಸ್ಕ್​ ಕಡ್ಡಾಯವಾಗಿ ಧರಿಸಿ ಎಂದು ಮನವಿ ಮಾಡಿದ ಅವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಮಾಸ್ಕ್​ ಧರಿಸದ ನಾಗರಿಕರಿಂದ 13 ಸಾವಿರ ಕೋಟಿ ರೂ ದಂಡ ವಸೂಲಿಯಾಗಿದ್ದು, ದೇಶದ ಜನರ ಜೀವ ಕಾಪಾಡಲು ನಾವು ಈ ಮಾರ್ಗಸೂಚಿ ತಯಾರಿಸಿದ್ದೇವೆ ಎಂದು ಮೋದಿ ತಿಳಿಸಿದರು.

ಲಕ್ಷಾಂತರ ರೈತರ ಜನ್​ ಧನ್‌ ಖಾತೆಗೆ ಹಣ ಸೇರಿದೆ. ದೇಶದ ರೈತರಿಗೆ ಇದು ಸಹಕಾರಿಯಾಗಿದ್ದು, ಬಡವರ ಕುಟುಂಬಕ್ಕೆ 5 ಕೆ.ಜಿ ಅಕ್ಕಿ, ಗೋಧಿ ನೀಡಿದ್ದೇವೆ. ಜತೆಗೆ 1 ಕೆ.ಜಿ ಬೇಳೆ ನೀಡಲಾಗಿದೆ.

ಪ್ರಧಾನ್​ ಮಂತ್ರಿ ಗರೀಬ್​ ಕಲ್ಯಾಣ್ ಅನ್ನ​ ಯೋಜನೆ ವಿಸ್ತರಣೆ:

ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಈಗಾಗಲೇ ಜಾರಿಯಲ್ಲಿರುವ ಪ್ರಧಾನ್​ ಮಂತ್ರಿ ಗರೀಬ್​ ಕಲ್ಯಾಣ್ ಅನ್ನ​ ಯೋಜನೆ ನವೆಂಬರ್​ ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ. ಜುಲೈನಿಂದ ನವೆಂಬರ್​ವರೆಗೆ ವಿಸ್ತರಣೆಯಾಗಿದ್ದು, 80 ಕೋಟಿ ಬಡ ಜನರಿಗೆ ಪ್ರತಿ ಕುಟುಂಬಕ್ಕೂ 5 ಕೆ.ಜಿ ಗೋಧಿ ಅಥವಾ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಿದ್ದೇವೆ. ಅದಕ್ಕಾಗಿ 90 ಕೋಟಿ ರೂ ಖರ್ಚು ಮಾಡಲಾಗುತ್ತಿದೆ ಎಂದು ಪ್ರಧಾನಿ ವಿವರಿಸಿದರು.

Last Updated : Jun 30, 2020, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.