ETV Bharat / bharat

ಅಜಯ್ ದೇವಗನ್ ಕುಟುಂಬಕ್ಕೆ ಪತ್ರದ ಮೂಲಕ ಪ್ರಧಾನಿ ಮೋದಿ ಸಂತಾಪ ಸಂದೇಶ - undefined

ಬಾಲಿವುಡ್ ನಟ ಅಜಯ್ ದೇವಗನ್ ತಂದೆ ವೀರು ದೇವಗನ್ ಇತ್ತೀಚೆಗೆ ನಿಧನರಾಗಿದ್ದು ಪ್ರಧಾನಿ ನರೇಂದ್ರ ಮೋದಿ ದೇವಗನ್ ಕುಟುಂಬಕ್ಕೆ ಪತ್ರವೊಂದರ ಮೂಲಕ ಸಂತಾಪ ಸಂದೇಶ ಕಳುಹಿಸಿದ್ದಾರೆ.

ಅಜಯ್​, ಪ್ರಧಾನಿ ಮೋದಿ
author img

By

Published : Jun 3, 2019, 9:47 PM IST

ಅನಾರೋಗ್ಯದ ಕಾರಣ ಮುಂಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜಯ್ ದೇವಗನ್ ತಂದೆ ವೀರು ದೇವಗನ್ ಚಿಕಿತ್ಸೆ ಫಲಕಾರಿಯಾಗದೆ ಮೇ 27 ರಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ವೀರು ನಿಧನಕ್ಕೆ ಬಾಲಿವುಡ್ ಸಂತಾಪ ಸೂಚಿಸಿತ್ತು. ಪ್ರಧಾನಿ ಮೋದಿ ಕೂಡಾ ವೀರು ನಿಧನಕ್ಕೆ ಸಂತಾಪ ಸೂಚಿಸಿ ಅವರ ಕುಟುಂಬಕ್ಕೆ ಪತ್ರವೊಂದನ್ನು ಬರೆದಿದ್ದಾರೆ. 'ತಮ್ಮ ಸ್ವಂತ ಪರಿಶ್ರಮದಿಂದ ಭಾರತೀಯ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದ ವೀರು ದೇವಗನ್​​​​​​​​​​​​​​​​​​​​​​​​​​​ ನಿಧನರಾದರೆಂದು ತಿಳಿದು ಬಹಳ ಬೇಸರವಾಯಿತು. ಅವರ ನಿಧನದಿಂದ ಹಿಂದಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಸ್ಟಂಟ್ ಮಾಸ್ಟರ್, ಆ್ಯಕ್ಷನ್ ಕೊರಿಯೋಗ್ರಾಫರ್, ನಿರ್ದೇಶಕ ಮಾತ್ರವಲ್ಲ ನಿರ್ಮಾಪಕರಾಗಿ ಕೂಡಾ ಅವರು ಕಾರ್ಯ ನಿರ್ವಹಿಸಿದ್ದಾರೆ.

  • My Mother & entire Devgan family are deeply touched & humbled in silence by this thoughtful gesture from our Honourable Prime Minister @narendramodi.
    Thank you Sir. 🙏 pic.twitter.com/sJzFRzvMZb

    — Ajay Devgn (@ajaydevgn) June 2, 2019 " class="align-text-top noRightClick twitterSection" data=" ">

ಸಾಕಷ್ಟು ಹೊಸ ತಂತ್ರಜ್ಞಾನಗಳನ್ನು ಬೆಳ್ಳಿತೆರೆಗೆ ವೀರು ಪರಿಚಯಿಸಿದ್ದಾರೆ. ಅವರು ಬಹಳ ಧೈರ್ಯವಂತರು, ಒಬ್ಬ ಆ್ಯಕ್ಷನ್ ಕೊರಿಯೋಗ್ರಾಫರ್ ಆಗಿ ಸಾಕಷ್ಟು ಕಷ್ಟಕರ ಸ್ಟಂಟ್​​​​ಗಳನ್ನು ಮಾಡಿರುವುದಲ್ಲದೆ ತಮ್ಮ ಜೊತೆಗೆ ಇರುವವರನ್ನು ಬಹಳ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದರು ವೀರು. ಚಿತ್ರೋದ್ಯಮದವರು ಅವರನ್ನು ಬಹಳ ಪ್ರೀತಿ, ಗೌರವದಿಂದ ಕಾಣುತ್ತಿದ್ದರು ಎಂದು ಹೇಳುವುದು ಬೇಕಿಲ್ಲ. ವಿಜ್ಯುವಲ್ ಎಫೆಕ್ಟ್​ ಇಲ್ಲದ ಸಮಯದಲ್ಲಿ ಪ್ರೇಕ್ಷರನ್ನು ರಂಜಿಸಲು ಅವರು ಬಹಳ ರಿಸ್ಕ್​ ತೆಗೆದುಕೊಳ್ಳುತ್ತಿದ್ದರು. ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ಹೊಸ ಪ್ರತಿಭೆಗಳಿಗೆ ವೀರೂ ದೇವಗನ್ ಯಾವಾಗಲೂ ಸ್ಫೂರ್ತಿಯಾಗಿರಲಿ ಎಂದು ಆಶಿಸುತ್ತೇನೆ. ಅವರ ನಿಧನದ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ' ಎಂದು ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಪ್ರಧಾನಿ ಅವರ ಸಂದೇಶಕ್ಕೆ ಧನ್ಯವಾದ ತಿಳಿಸಿರುವ ನಟ ಅಜಯ್ ದೇವಗನ್​​​ 'ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನನ್ನ ತಾಯಿ ಸೇರಿದಂತೆ ಇಡೀ ದೇವಗನ್ ಕುಟುಂಬ ಆಭಾರಿಯಾಗಿದ್ದೇವೆ' ಎಂದು ಪ್ರಧಾನಿ ಮೋದಿಗೆ ಟ್ವಿಟರ್ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

Intro:Body:

Ajay devagan

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.