ETV Bharat / bharat

ಪ್ರೇಮಸೌಧಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್​ ಭೇಟಿ... ತಾಜ್​ಮಹಲ್​ಗೆ ಡೊನಾಲ್ಡ್ ಕೊಟ್ಟ ಹೊಸ ಟೈಟಲ್​ ಇದು​! - ಪ್ರೇಮ ಸೌಧಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್

ಭಾರತದ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಇದೀಗ ಪ್ರೇಮಸೌಧ ತಾಜ್​ಮಹಲ್​ಗೆ ಭೇಟಿ ನೀಡಿದ್ದು, ಇದೊಂದು ಸಾವಿಲ್ಲದ ಸ್ಮಾರಕ ಎಂದು ಬಣ್ಣನೆ ಮಾಡಿದ್ದಾರೆ.

Prez Trump visits Taj Mahal
Prez Trump visits Taj Mahal
author img

By

Published : Feb 24, 2020, 6:17 PM IST

ಆಗ್ರಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​,ಹೆಂಡತಿ ಮೆಲಾನಿಯಾ ಹಾಗೂ ಮಗಳು ಇವಾಂಕಾ ಐತಿಹಾಸಿಕ ತಾಜ್​ ಮಹಲ್​ಗೆ ಭೇಟಿ ನೀಡಿದರು.

ಪ್ರೇಮಸೌಧಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್​ ಭೇಟಿ

ಮೊಟೆರಾ ಸ್ಟೇಡಿಯಂನಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ನೇರವಾಗಿ ಆಗ್ರಾಕ್ಕೆ ಬಂದಿಳಿದ ಟ್ರಂಪ್​ ಕುಟುಂಬ ಪ್ರೇಮ ಸ್ಮಾರಕ ತಾಜ್​ಮಹಲ್​ ವೀಕ್ಷಣೆ ಮಾಡಿ ಕ್ಯಾಮೆರಾಗೆ ಪೋಜ್​ ನೀಡಿದರು. ಇದಾದ ಬಳಿಕ ವಿಸಿಟರ್​ ಬುಕ್​​ನಲ್ಲಿ ತಾಜ್​ ಮಹಲ್​ ಭಾರತದ ವೈವಿಧ್ಯತೆಯ ಅನಂತತೆಯ ಪ್ರತೀಕ. ನಾವು ಭಾರತೀಯ ಸಂಸ್ಕೃತಿಯನ್ನ ಪ್ರೀತಿಸುತ್ತೇವೆ ಎಂದು ಬರೆದಿದ್ದಾರೆ. ಇದೇ ವೇಳೆ ಇದೊಂದು ಸಾವಿಲ್ಲದ ಸ್ಮಾರಕ ಎಂದು ಬಣ್ಣಿಸಿದರು.

  • US President Donald Trump's message in the visitor's book at the Taj Mahal- "Taj Mahal inspires awe, a timeless testament to the rich and diverse beauty of Indian culture! Thank you, India". pic.twitter.com/QtD87OeiYk

    — ANI (@ANI) February 24, 2020 " class="align-text-top noRightClick twitterSection" data=" ">

ತಾಜ್​ ಮಹಲ್​ ಬಗ್ಗೆ ಗೈಡ್​ವೊಬ್ಬರು ಇವರಿಗೆ ಮಾಹಿತಿ ನೀಡಿದ್ದು, ಈ ಸ್ಥಳದಲ್ಲಿ ಸುಮಾರು 45ಕ್ಕೂ ಹೆಚ್ಚು ನಿಮಿಷಗಳ ಕಾಲ ಟ್ರಂಪ್​ ಸಮಯ ಕಳೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.