ಅಹ್ಮದಾಬಾದ್/ಆಗ್ರಾ: ಫೆಬ್ರವರಿ 24 ರಂದು ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಗೆ ಹಿನ್ನೆಲೆ ಖೇರಿಯಾ ವಿಮಾನ ನಿಲ್ದಾಣದಿಂದ ತಾಜ್ಮಹಲ್ಗೆ ಹೋಗುವ ಮಾರ್ಗದಲ್ಲಿನ ಗೋಡೆಗಳ ಮೇಲೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸುವ ಬರಹಗಳು ಮತ್ತು ಚಿತ್ರಗಳನ್ನು ಚಿತ್ರಿಸಲಾಗಿದೆ.
ಡೊನಾಲ್ಡ್ ಟ್ರಂಪ್‌ಗೆ ವೈಮಾನಿಕ ಭದ್ರತೆ ಹಾಗೂ ರಕ್ಷಣೆಗಾಗಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಡ್ರೋನ್ ಪತ್ತೆ ಹಚ್ಚುವ ಆ್ಯಂಟಿ ಡ್ರೋನ್ ಆಧುನಿಕ ಉಪಕರಣವನ್ನು ಬಳಸಲಾಗುತ್ತಿದೆ. ಇದನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ಇದು ಡ್ರೋನ್ಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗಲಿದೆ.