ETV Bharat / bharat

ಸಾಗರೋತ್ತರ ಭಾರತೀಯರ ಕೊಡುಗೆ ಸ್ಮರಿಸುವ ದಿನ 'ಪ್ರವಾಸಿ ಭಾರತೀಯ ದಿವಸ್'

16 ನೇ ಪ್ರವಾಸಿ ಭಾರತೀಯ ದಿವಸ್​ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಇದೇ ತಿಂಗಳ 9 ರಂದು ಚಾಲನೆ ನೀಡಲಿದ್ದಾರೆ.

author img

By

Published : Jan 7, 2021, 10:44 PM IST

Pravasi Bharatiya Divas 09th January
ಪ್ರವಾಸಿ ಭಾರತೀಯ ದಿವಾಸ್ 2021

ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ಜನವರಿ 9 ಅನ್ನು ಪ್ರವಾಸಿ ಭಾರತೀಯ ದಿವಸ್ ಎಂದು ಘೋಷಣೆ ಮಾಡಲಾಗಿದೆ.

1915 ರಂದು ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳುತ್ತಾರೆ ಹಾಗೆ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮತ್ತು ಭಾರತೀಯರ ಜೀವನವನ್ನು ಶಾಶ್ವತವಾಗಿ ಬದಲಾಯಿಸಲು ಮೊದಲ ಹೆಜ್ಜೆ ಇಡುತ್ತಾರೆ ಈ ಕಾರಣಕ್ಕಾಗಿ ಈ ದಿನದಂದೇ ಪ್ರವಾಸಿ ಭಾರತೀಯ ದಿವಸ್ ಆಚರಣೆ ಮಾಡಲಾಗುತ್ತದೆ.

ಸಾಗರೋತ್ತರ ಭಾರತೀಯ ಸಮುದಾಯದವರು ಭಾರತ ಸರ್ಕಾರದೊಂದಿಗೆ ತೊಡಗಿಸಿಕೊಳ್ಳುವುದನ್ನು ಬಲಪಡಿಸಲು ಎರಡು ವರ್ಷಗಳಿಗೊಮ್ಮೆ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.

16 ನೇ ಪ್ರವಾಸಿ ಭಾರತೀಯ ದಿವಸ್​ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಇದೇ ತಿಂಗಳ 9 ರಂದು ಚಾಲನೆ ನೀಡಲಿದ್ದಾರೆ.

ಮುಖ್ಯ ಧ್ಯೇಯ:

ಈ ಸಾಲಿನ ದಿನಾಚರಣೆಯಲ್ಲಿ ಆತ್ಮನಿರ್ಭರ ಭಾರತದ ಅಂಶವನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಜಾಗತಿಕ ಮಟ್ಟದಲ್ಲಿ ಕಠಿಣ ಸ್ಪರ್ಧೆಯ ವಿರುದ್ಧ ಭಾರತವನ್ನು ಸ್ವತಂತ್ರವಾಗಿಸಲು ಮತ್ತು ನಾಗರಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಅಧಿಕಾರ ನೀಡುವುದು ಇದರ ಉದ್ದೇಶವಾಗಿದೆ.

ಈ ಸಮಾವೇಶವು ಮೂರು ವಿಭಾಗಗಳನ್ನು ಹೊಂದಿದೆ. ಪಿಬಿಡಿ ಸಮಾವೇಶವನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣ ಮಾಡಲಿದ್ದಾರೆ. ಹಾಗೆಯೇ ಆನ್‌ಲೈನ್ ಭಾರತ್ ಕೋ ಜಾನಿಯೆ ರಸಪ್ರಶ್ನೆ ವಿಜೇತರನ್ನೂ ಈ ವೇಳೆ ಘೋಷಣೆ ಮಾಡಲಿದ್ದಾರೆ.

ಪ್ರವಾಸಿ ಭಾರತೀಯ ಸಮ್ಮನ್ ಪ್ರಶಸ್ತಿ:

ಪ್ರವಾಸಿ ಭಾರತೀಯ ಸಮ್ಮನ್ ಪ್ರಶಸ್ತಿಯು ಅನಿವಾಸಿ ಭಾರತೀಯರಿಗೆ ನೀಡಲಾಗುವ ಅತ್ಯುನ್ನತ ಗೌರವವಾಗಿದೆ. ವಿದೇಶದಲ್ಲಿ ಭಾರತವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವಲ್ಲಿ ಮಹತ್ವದ ಕೊಡುಗೆ ನೀಡಿದ ಅನಿವಾಸಿ ಭಾರತೀಯರು ಅಥವಾ ಭಾರತೀಯ ಮೂಲದ ವ್ಯಕ್ತಿಗಳು ಸ್ಥಾಪಿಸಿದ ಸಂಸ್ಥೆಗಳಿಗೆ ಈ ಗೌರವ ಸಿಗಲಿದೆ.

ಭಾರತ್ ಕೋ ಜನಿಯೆ ರಸಪ್ರಶ್ನೆ (ಬಿಕೆಜೆ)

ಸಾಗರೋತ್ತರ ಯುವ ಭಾರತೀಯರೊಂದಿಗೆ ಸಂಬಂಧ ಬಲಪಡಿಸುವ ಸಲುವಾಗಿ ಮತ್ತು ಅವರ ಮೂಲ ಸ್ಥಾನವಾದ ಭಾರತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರೋತ್ಸಾಹಿಸುವ ಕಾರಣಕ್ಕೆ ಭಾರತ್ ಕೋ ಜಾನಿಯೆ ರಸಪ್ರಶ್ನೆ ಕಾರ್ಯಕ್ರಮವನ್ನು 2015-16ರಲ್ಲಿ ಪ್ರಾರಂಭಿಸಲಾಯಿತು.

ಭಾರತ್ ಕೋ ಜಾನಿಯೆ ರಸಪ್ರಶ್ನೆಯ ಮೊದಲ ಆವೃತ್ತಿಯನ್ನು 2015-16ರಲ್ಲಿ 18-35 ವರ್ಷ ವಯಸ್ಸಿನ ಯುವ ಸಾಗರೋತ್ತರ ಭಾರತೀಯರಿಗಾಗಿ ಆಯೋಜಿಸಲಾಗಿತ್ತು. ಇದರ ನಂತರ 2018-19ರಲ್ಲಿ ಎರಡನೇ ಆವೃತ್ತಿ ಹಾಗೂ ಈ ವರ್ಷ ಮೂರನೇ ಆವೃತ್ತಿಯನ್ನು ಸೆಪ್ಟೆಂಬರ್ 30 ರಿಂದ 2020 ರ ಡಿಸೆಂಬರ್ 28 ರವರೆಗೆ ನಡೆಸಲಾಗಿದೆ.

ಭಾರತ್ ಕೋ ಜಾನಿಯೆ ರಸಪ್ರಶ್ನೆಯ ಹದಿನೈದು ವಿಜೇತರನ್ನು ಪಿಬಿಡಿ ಸಮಾವೇಶದಲ್ಲಿ ಘೋಷಿಸಲಾಗುವುದು ಹಾಗೆ ಅವರನ್ನು ಭಾರತ ಪ್ರವಾಸಕ್ಕೆ ಆಹ್ವಾನಿಸಲಾಗುತ್ತದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ವಿದೇಶದಲ್ಲಿ ಸಿಲುಕಿದ್ದ ವಲಸಿಗರಿಗೆ ಸರ್ಕಾರದ ಉಪಕ್ರಮಗಳು

ದೇಶಾದ್ಯಂತದ ಲಾಕ್ ಡೌನ್ ಸಮಯದಲ್ಲಿ ವಿದೇಶಗಳಲ್ಲಿ ಸಿಲುಕಿದ್ದ ನಮ್ಮವರನ್ನು ಮರಳಿ ತರಲು ಸರ್ಕಾರ ಅನೇಕ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು,ಅವುಗಳೆಂದರೆ.

ವಂದೇ ಭಾರತ್ ಮಿಷನ್:

'ವಂದೇ ಭಾರತ್' ಮಿಷನ್- ಹಂತ 8+ ಅಡಿಯಲ್ಲಿ ವಿದೇಶದಿಂದ 4 ಮಿಲಿಯನ್ ಭಾರತೀಯರನ್ನು ಕರೆತರಲಾಯಿತು. ಈ ಹಂತದಲ್ಲಿ 27 ದೇಶಗಳಿಂದ 1005 ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಬಳಕೆ ಮಾಡಿಕೊಳ್ಳಲಾಯಿತು. ಡಿಸೆಂಬರ್ 22 ರ ಹೊತ್ತಿಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಭಾರತಕ್ಕೆ ಬರುವಂತಾಯಿತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಆಪರೇಷನ್ ಸಮುದ್ರ ಸೇತು:

COVID-19 ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ನಾಗರಿಕರನ್ನು ವಿದೇಶದಿಂದ ವಾಪಸ್ ಕಳುಹಿಸುವ ರಾಷ್ಟ್ರೀಯ ಪ್ರಯತ್ನದ ಭಾಗವಾಗಿ 2020 ಮೇ 05 ರಂದು ಪ್ರಾರಂಭಿಸಲಾದ ಆಪರೇಷನ್ ಸಮುದ್ರ ಸೆತು ಮುಖಾಂತರ 3,992 ಭಾರತೀಯ ನಾಗರಿಕರನ್ನು ಯಶಸ್ವಿಯಾಗಿ ಸಮುದ್ರದ ಮೂಲಕ ತಾಯ್ನಾಡಿಗೆ ಕರೆತರಲಾಯಿತು.

55 ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾ ಹಡಗುಗಳಾದ ಜಲಶ್ವಾ (ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್), ಮತ್ತು ಐರಾವತ್, ಶಾರ್ದುಲ್ ಮತ್ತು ಮಾಗರ್ (ಲ್ಯಾಂಡಿಂಗ್ ಶಿಪ್ ಟ್ಯಾಂಕ್‌ಗಳು) ಭಾಗವಹಿಸಿದ್ದವು.

ಮಿಷನ್ ಸಾಗರ್:

ಮಾಲ್ಡೀವ್ಸ್, ಮಾರಿಷಸ್, ಮಡಗಾಸ್ಕರ್, ಕೊಮೊರೊಸ್ ದ್ವೀಪಗಳು ಮತ್ತು ಸೀಶೆಲ್ಸ್‌ಗೆ ಆಯುರ್ವೇದ ಔಷಧಿಗಳನ್ನು ಒಳಗೊಂಡಂತೆ 580 ಟನ್ ಆಹಾರ ಹಾಗೂ ವೈದ್ಯಕೀಯ ಪರಿಕರಗಳನ್ನ್ಉ ಹೊತ್ತು ಅವರಿಗೆ ನೀಡುವ ಕೆಲಸ ಮಾಡಿತು. ಹಾಗೆ ಮಿಷನ್ ಭಾಗವಾಗಿ ಮಾರಿಷಸ್ ಮತ್ತು ಕೊಮೊರೊಸ್ ದ್ವೀಪದಲ್ಲಿ ತಲಾ ಒಂದು ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿತ್ತು.

ಪಿಬಿಡಿ ಸಮ್ಮೇಳನ:

  • 16 ನೇ ಪಿಬಿಡಿ ಕನ್ವೆನ್ಷನ್ 2021 ರ ಜನವರಿ 9 ರಂದು ನಡೆಯಲಿದೆ. ಪ್ರಮುಖ ಪಿಬಿಡಿ ಕನ್ವೆನ್ಷನ್‌ಗೆ ಅನುಗುಣವಾಗಿ, ಐದು ಪೂರ್ವ ಪಿಬಿಡಿ ಸಮ್ಮೇಳನಗಳನ್ನು ಈ ಕೆಳಗಿನ ವಿಷಯಗಳ ಮೇಲೆ ನಡೆಸಲಾಗುತ್ತಿದೆ.
  • ಭಾರತೀಯ ಸಂಸ್ಕೃತಿಯ ಉತ್ತೇಜನದಲ್ಲಿ ವಲಸೆಗಾರರ ​​ಪಾತ್ರ
  • ಡಯಾಸ್ಪೊರಾ ಉದ್ಯಮ ನಾಯಕರು ಮತ್ತು ಸಿಇಒಗಳೊಂದಿಗೆ ಸಂವಾದ - ಎಂಎಸ್‌ಎಂಇಗಳನ್ನು ಹೆಚ್ಚಿಸುವ ಮೂಲಕ ಯುಎಸ್ $ 5 ಟ್ರಿಲಿಯನ್ ಆತ್ಮನಿರ್ಭರ ಭಾರತದ ಆರ್ಥಿಕತೆಯನ್ನು ಹೆಚ್ಚಿಸುವುವ ಗುರಿ
  • ಪ್ರಾದೇಶಿಕ ಪಿಬಿಡಿ - ಜಿಸಿಸಿ -ಇಂಡಿಯಾ ಪ್ರವಾಸಿ ಭಾರತೀಯ ದಿವಸ್
  • ಭಾರತ @ 75 ಅನ್ನು ಪ್ರದರ್ಶಿಸಲು ಮಾಧ್ಯಮ ಮತ್ತು ಮನರಂಜನಾ ಸಹಭಾಗಿತ್ವವನ್ನು ರೂಪಿಸುವುದು
  • ಭಾರತದ ಯುವ ಸಾಧಕರು ಮತ್ತು ಡಯಾಸ್ಪೊರಾ ಯುವ ಸಾಧಕರನ್ನು ವಿವಿಧ ಹಂತಗಳಿಂದ ಒಟ್ಟುಗೂಡಿಸುವುದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.