ETV Bharat / bharat

ಹ್ಯಾಪಿ ಬರ್ತಡೇ ಪವನ್​ ಕಲ್ಯಾಣ್, ನೀವು ಆಂಧ್ರದ ಮುಂದಿನ ಲೀಡರ್​: ಪ್ರತಾಪ್​ ಸಿಂಹ ಶುಭ ಹಾರೈಕೆ - ಪವನ್ ಕಲ್ಯಾಣ್​ಗೆ ಜನ್ಮದಿನ ಶುಭಾಶಯ

ಸಾಮಾಜಿಕ ಜಾಲತಾಣದಲ್ಲಿ ಪವನ್ ಕಲ್ಯಾಣ್ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿವೆ. ದಕ್ಷಿಣ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ಸಂಸದ ಪ್ರತಾಪ್ ಸಿಂಹ ಸಹ ಶುಭ ಹಾರೈಸಿದ್ದು, ಪವನ್ ಕಲ್ಯಾಣ್ ಭವಿಷ್ಯದಲ್ಲಿ ಆಂಧ್ರ ಪ್ರದೇಶದ ನಾಯಕರಾಗಲಿದ್ದಾರೆ ಎಂದು ಹೇಳಿದ್ದಾರೆ.

pratap simha
ಪ್ರತಾಪ್ ಸಿಂಹ
author img

By

Published : Sep 2, 2020, 9:13 PM IST

ಹೈದರಾಬಾದ್​: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು 49ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ದಕ್ಷಿಣ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ಜನಸಾಮಾನ್ಯರಿಂದ ಹಿಡಿದು ರಾಜಕೀಯ ಮುಖಂಡರರವರೆಗೆ ಎಲ್ಲರೂ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಹೊದ್ಯೋಗಿ ಸಂಸದ ತೇಜಸ್ವಿ ಸೂರ್ಯ ಹಾಗೂ ಪವನ್ ಕಲ್ಯಾಣ್ ಜೊತೆಗೆ ಇರುವ ಫೋಟೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಪವರ್ ಸ್ಟಾರ್​ ಅವರಿಗೆ ಜನ್ಮದಿನದ ಶುಭ ಕೋರಿದ್ದಾರೆ.

ಸಂತೋಷ ತುಂಬಿದ ಜನ್ಮ ದಿನದ ಶುಭಾಶಯಗಳು ಪವನ್ ಕಲ್ಯಾಣ್ ಸರ್. ಮುಂಬರುವ ದಿನಗಳಲ್ಲಿ ನೀವು ಆಂಧ್ರಪ್ರದೇಶವನ್ನು ಮುನ್ನಡೆಸುವ ಮತ್ತು ಮಾರ್ಗದರ್ಶನ ನೀಡುವ ನಾಯಕರಾಗಲಿರುವಿರಿ ಎಂದು ಭಾವಿಸುತ್ತೇವೆ ಎಂದು ಬರೆದು ಶುಭಾಶಯ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.