ನವದೆಹಲಿ: ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನೆಯ ರಿಸರ್ಚ್ ಆ್ಯಂಡ್ ರೆಫರೆಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಅವರ ಪುತ್ರ ಹೇಳುವಂತೆ, ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ.
-
Update : My father is & has always been a fighter ! He is slowly responding to medical interventions & all his vital parameters are stable .
— Abhijit Mukherjee (@ABHIJIT_LS) August 13, 2020 " class="align-text-top noRightClick twitterSection" data="
I urge upon every well wisher to pray for my father's speedy recovery ! We need them 🙏 https://t.co/7FdYxcUwXR
">Update : My father is & has always been a fighter ! He is slowly responding to medical interventions & all his vital parameters are stable .
— Abhijit Mukherjee (@ABHIJIT_LS) August 13, 2020
I urge upon every well wisher to pray for my father's speedy recovery ! We need them 🙏 https://t.co/7FdYxcUwXRUpdate : My father is & has always been a fighter ! He is slowly responding to medical interventions & all his vital parameters are stable .
— Abhijit Mukherjee (@ABHIJIT_LS) August 13, 2020
I urge upon every well wisher to pray for my father's speedy recovery ! We need them 🙏 https://t.co/7FdYxcUwXR
ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ತಂದೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹಾಗೆಯೇ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರ ಚೇತರಿಕೆಗಾಗಿ ನಿಮ್ಮ ಹಾರೈಕೆಗಳನ್ನು ಮುಂದುವರಿಸುವಂತೆ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ ಎಂದು ಅಭಿಜಿತ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ.
ಮಿದುಳಿನಲ್ಲಿ ಹೆಪ್ಪುಗಟ್ಟಿದ ರಕ್ತ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಶಸ್ತ್ರಚಿಕಿತ್ಸೆಗೂ ಮುನ್ನ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಕೋವಿಡ್-19 ಸೋಂಕು ಅವರಿಗೆ ತಗುಲಿರುವುದು ದೃಢಪಟ್ಟಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಣಬ್ ಮುಖರ್ಜಿ ಅವರು ವಿಧಿವಶರಾಗಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಈ ಬೆಳವಣಿಗೆಗಳಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಭಿಜಿತ್ ಮುಖರ್ಜಿ, ಅಪ್ಪ ಇನ್ನೂ ಬದುಕಿದ್ದಾರೆ. ಊಹಾಪೋಹದ ಸುದ್ದಿಗಳನ್ನು ಸುಖಾಸುಮ್ಮನೆ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದರು.