ETV Bharat / bharat

ದೇಶ ಮೆಚ್ಚಿದ ತೀರ್ಪು: ನ್ಯಾಯಮೂರ್ತಿಗಳಿಗೆ ಸಿಜೆಐ ಗೊಗೊಯಿ ವಿಶೇಷ ಔತಣಕೂಟ

author img

By

Published : Nov 9, 2019, 8:00 PM IST

ಅಯೋಧ್ಯೆ-ರಾಮಜನ್ಮ ಭೂಮಿ ವಿವಾದದ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಇನ್ನು ಕೆಲವೇ ದಿನಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಏಳು ದಶಕಗಳ ವಿವಾದಕ್ಕೆ ಕೊನೆಗೂ ತೆರೆ ಎಳೆಯುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ಸಾಂವಿಧಾನಿಕ ಪಂಚ ನ್ಯಾಯಪೀಠದ ನ್ಯಾಯಮೂರ್ತಿಗಳಿಗೆ ರಂಜನ್ ಗೊಗೋಯಿ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ.

ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಐವರು ಸದಸ್ಯರ ಪೀಠ

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್‌ ದೇಶದ ಜನರ ಮೆಚ್ಚುಗೆ ಗಳಿಸಿದೆ. ಬರೋಬ್ಬರಿ ಏಳು ದಶಕಗಳ ವಿವಾದಕ್ಕೆ ತೆರೆ ಎಳೆಯುವಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳ ಪರಿಶ್ರಮ ಕಡಿಮೆಯೇನಲ್ಲ. ಇವತ್ತು ಐತಿಹಾಸಿಕ ತೀರ್ಪು ಪ್ರಕಟಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಗಳಿಗೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯಿ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್​ ನವೆಂಬರ್​ 17ರಂದು ನಿವೃತ್ತಿ ಹೊಂದುತ್ತಿದ್ದಾರೆ. ಇದ್ರ ಬೆನ್ನಲ್ಲೇ ಅತ್ಯಂತ ವಿವಾದಿತ ಪ್ರಕರಣದ ಬಗ್ಗೆ ದೇಶ ಮೆಚ್ಚಿದ ತೀರ್ಪು ಪ್ರಕಟಿಸಿದ ಸಂವಿಧಾನಿಕ ಪೀಠದ ನಾಲ್ವರು ನ್ಯಾಯಾಧೀಶರಿಗೆ ಅವರು ಔತಣಕೂಟ ಏರ್ಪಡಿಸಿದ್ದಾರೆ.

ನವದೆಹಲಿಯಲ್ಲಿರುವ ತಾಜ್​ ಮಾನ್ಸಿಂಗ್​ ಹೊಟೇಲ್​​ನಲ್ಲಿ ನ್ಯಾ. ಎಸ್.ಎ. ಬೋಬ್ಡೆ, ನ್ಯಾ.ವೈ. ಚಂದ್ರಚೂಡ್,ನ್ಯಾ.ಅಶೋಕ್ ಭೂಷಣ್ ಹಾಗೂ ನ್ಯಾ. ಅಬ್ದುಲ್ ನಜೀರ್ ವಿಶೇಷ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

70 ವರ್ಷಗಳಷ್ಟು ಹಳೆಯದಾದ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್ 6 ರಿಂದ 40 ದಿನಗಳ ಕಾಲ ನಿತ್ಯ ವಿಚಾರಣೆ ನಡೆದಿತ್ತು.

Intro:Body:

ಐತಿಹಾಸಿಕ ಅಯೋಧ್ಯೆ ತೀರ್ಪು ಬರೆದ ನ್ಯಾಯಾಧೀಶರಿಗೆ ಸಿಜೆಐ ಗೊಗೊಯಿ ಔತಣಕೂಟ! 

ನವದೆಹಲಿ: ಬಹುವಿವಾದಿತ ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ತೀರ್ಪು ಇಂದು ಹೊರಬಿದ್ದಿದ್ದು, ಸುಪ್ರೀಂಕೋರ್ಟ್​​ನ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಐವರು ಸದಸ್ಯರ ಪೀಠ ಮಹತ್ವದ ತೀರ್ಪು ಹೊರಹಾಕಿದೆ. 

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ರಂಜನ್ ಗೊಗೋಯ್​ ಬರುವ ನವೆಂಬರ್​ 17ರಂದು ನಿವೃತ್ತಿ ಹೊಂದುತ್ತಿರುವ ಕಾರಣ, ಐತಿಹಾಸಿಕ ತೀರ್ಪು ಪ್ರಕಟಿಸಿದ ಸಂವಿಧಾನಿಕ ಪೀಠದ ನಾಲ್ವರು ನ್ಯಾಯಾಧೀಶರಿಗೆ ಔತಣಕೂಟ ಏರ್ಪಡಿಸಿದ್ದಾರೆ. 

ನವದೆಹಲಿಯಲ್ಲಿರುವ ತಾಜ್​ ಮಾನ್ಸಿಂಗ್​ ಹೊಟೇಲ್​​ನಲ್ಲಿ ಜಸ್ಟೀಸ್ ಎಸ್ ಎ ಬೋಬ್ಡೆ, ಜಸ್ಟೀಸ್ ಡಿವೈ ಚಂದ್ರಚೂಡ್, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಅಬ್ದುಲ್ ನಝೀರ್ ಅವರಿಗೆ ಔತಣಕೂಟ ನೀಡುತ್ತಿದ್ದಾರೆ. 

ಏಳು ದಶಕಗಳ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್ 6ರಿಂದ 40 ದಿನಗಳ ಕಾಲ ನಿತ್ಯ ವಿಚಾರಣೆ ನಡೆಸಿದ ಪೀಠ, ಅಕ್ಟೋಬರ್ 17ರಂದು ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸುವ ಮೂಲಕ ದಶಕಗಳ ವಿವಾದಕ್ಕೆ ತೆರೆ ಎಳೆದಿದೆ. ಇದೇ ಸಂತೋಷದಲ್ಲಿರುವ ರಂಜನ್​ ಗೊಗೊಯಿ ಅಯೋಧ್ಯೆ ಪೀಠದಲ್ಲಿದ್ದ ನಾಲ್ವರು ನ್ಯಾಯಾಧೀಶರಿಗೆ ಈ ಪಾರ್ಟಿ ಏರ್ಪಡಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.