ETV Bharat / bharat

ವಾಯುದಾಳಿ ಬಳಿಕ ಪಾಕ್ ಕಣ್ಣಾಮುಚ್ಚಾಲೆ ಆಟ; ಇದು 21 ದಿನದ ಸಬ್​ಮೆರಿನ್ ಹುಡುಕಾಟದ ರೋಚಕ ಕಹಾನಿ

ಬಾಲಾಕೋಟ್ ವಾಯುದಾಳಿಯ ಬಳಿಕ ಪಾಕಿಸ್ತಾನದ ಹೊಂದಿದ್ದ ಅಗೋಸ್ತಾ ಕ್ಲಾಸ್​ನ ಪಿಎನ್​ಎಸ್​ ಸಾದ್​​ ಎನ್ನುವ ಅತ್ಯಾಧುನಿಕ ಸಬ್​ಮೆರಿನ್​ ತನ್ನ ಕಾರ್ಯಕ್ಷೇತ್ರದಿಂದ ನಾಪತ್ತೆಯಾಗಿತ್ತು ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ಸಬ್​ಮೆರಿನ್
author img

By

Published : Jun 23, 2019, 5:42 PM IST

ನವದೆಹಲಿ: ಪುಲ್ವಾಮಾ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ನಡೆಸಿದ್ದ ಏರ್​ಸ್ಟ್ರೈಕ್ ಬಳಿಕ ಭಾರತೀಯ ನೌಕಾಸೇನೆ ಸುಮಾರು 3 ವಾರಗಳ ಕಾಲ ಪಾಕಿಸ್ತಾನ ಜಲಾಂತರ್ಗಾಮಿಗಾಗಿ ಸತತ ಹುಡುಕಾಟ ನಡೆಸಿತ್ತು ಎಂಬ ಅಚ್ಚರಿಯ ವಿಚಾರ ಇದೀಗ ಹೊರಬಿದ್ದಿದೆ.

ಪುಲ್ವಾಮಾ ಭಯೋತ್ಪಾದಕ ಕೃತ್ಯದ ನಂತರ ಭಾರತ ಪಾಕಿಸ್ತಾನದ ಮಿಲಿಟರಿ ಚಲನವಲನದ ಮೇಲೆ ತೀವ್ರ ನಿಗಾ ಇಟ್ಟಿತ್ತು. ಆದರೆ ಬಾಲಾಕೋಟ್ ವಾಯುದಾಳಿಯ ಬಳಿಕ ಪಾಕಿಸ್ತಾನದ ಹೊಂದಿದ್ದ ಅಗೋಸ್ತಾ ಕ್ಲಾಸ್​ನ ಪಿಎನ್​ಎಸ್​ ಸಾದ್​​ ಎನ್ನುವ ಅತ್ಯಾಧುನಿಕ ಸಬ್​ಮೆರಿನ್​ ತನ್ನ ಕಾರ್ಯಕ್ಷೇತ್ರದಿಂದ ನಾಪತ್ತೆಯಾಗಿತ್ತು ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ಪಿಎನ್​ಎಸ್ ಸಾದ್ ಏರ್​ ಇಂಡಿಪೆಂಡೆಂಟ್ ಪ್ರೊಪಲ್ಶನ್(Air Independent Propulsion)​ ಎನ್ನುವ ತಂತ್ರಜ್ಞಾನ ಹೊಂದಿದ್ದು, ಈ ಮೂಲಕ ಸಾಮಾನ್ಯ ಸಬ್​​ಮೆರಿನ್​​ಗಿಂತ ಹೆಚ್ಚು ಅವಧಿಗೆ ನೀರಿನ ಒಳಭಾಗದಲ್ಲಿ ತಟಸ್ಥವಾಗಿರಬಲ್ಲದು. ಈ ವಿಚಾರ ತಿಳಿದಿದ್ದ ಭಾರತ ಈ ಸಬ್​ಮೆರಿನ್​​ಗಾಗಿ ಭಾರಿ ಹುಡುಕಾಟ ನಡೆಸಿತ್ತು.

Pakistani submarine
ಪಿಎನ್​ಎಸ್​ ಸಾದ್ ಹೆಸರಿನ ಅತ್ಯಾಧುನಿಕ ಸಬ್​ಮೆರಿನ್

ಕರಾಚಿ ಸಮೀಪದಿಂದ ಪಿಎನ್​ಎಸ್​ ಸಾದ್ ಕಣ್ಮರೆಯಾಗಿತ್ತು. ಈ ಸಬ್​ಮೆರಿನ್ ಗುಜರಾತನ್ನು ಐದು ದಿನದಲ್ಲಿ, ಮುಂಬೈ ಅನ್ನು ಐದು ದಿನದಲ್ಲಿ ತಲುಪುವ ಸಾಮರ್ಥ್ಯ ಹೊಂದಿತ್ತು. ಇದು ನಿಜಕ್ಕೂ ಭಾರತದ ಭದ್ರತೆಗೆ ಅತಿದೊಡ್ಡ ಸವಾಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪಿಎನ್​ಎಸ್ ಸಾದ್ ಹುಡುಕಾಟಕ್ಕೆ ಆಧುನಿಕ ಆ್ಯಂಟಿ ಸಬ್​ಮೆರಿನ್​​ ಹಾಗೂ ವಿಮಾನಗಳನ್ನು ಬಳಸಿ ಭಾರತ ದೊಡ್ಡ ಮಟ್ಟದಲ್ಲಿ ಹುಡುಕಾಟ ನಡೆಸಿತ್ತು.

ಕರಾಚಿಯನ್ನು ಮೂಲವಾಗಿರಿಸಿ ಪಿಎನ್​ಎಸ್​ ಒಂದು ಅವಧಿಯಲ್ಲಿ ತಲುಪಬಹುದಾದ ಎಲ್ಲ ಸ್ಥಳಗಳನ್ನು ಅಂತಿಮಗೊಳಿಸಿ ದೊಡ್ಡ ಕಾರ್ಯಾಚರಣೆ ಮಾಡಲಾಯಿತು. ಗುಜರಾತ್‌​, ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯಗಳ ಕರಾವಳಿ ಭಾಗದಲ್ಲಿ ಹುಡುಕಾಟ ನಡೆಸಲಾಯಿತು. ಒಂದು ವೇಳೆ ಪಿಎನ್​ಎಸ್ ಸಾದ್ ಭಾರತದ ಜಲಮಾರ್ಗವನ್ನು ಪ್ರವೇಶಿಸಿದ್ದರೆ ವಹಿಸಬೇಕಾದ ಎಲ್ಲ ರೀತಿಯ ಮುಂಜಾಗ್ರತೆಯನ್ನು ಮಾಡಿಕೊಂಡೇ ಹುಡುಕಾಟ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ನ್ಯೂಕ್ಲಿಯರ್ ಸಬ್​ಮೆರಿನ್​ ಐಎನ್​ಎಸ್​ ಚಕ್ರ ಹಾಗೂ ಐಎನ್​ಎಸ್ ಕಲ್ವಾರಿಯನ್ನು ಕಾರ್ಯಾಚರಣೆಗೆ ಇಳಿಸಿ ಭಾರತೀಯ ನೌಕಾದಳ ಪಾಕಿಸ್ತಾನದಿಂದ ಎದುರಾಬಹುದಾದ ಎಲ್ಲ ದಾಳಿಗೂ ಸಾಕಷ್ಟು ಎಚ್ಚರ ವಹಿಸಿತ್ತು. ದಿನದಿಂದ ದಿನಕ್ಕೆ ಹುಡುಕಾಟವನ್ನು ಮತ್ತಷ್ಟು ಚುರುಕುಗೊಳಿಸಿ ಉಪಗ್ರಹಗಳ ಸಹಾಯವನ್ನೂ ಪಡೆಯಲಾಗಿತ್ತು.

ಬರೋಬ್ಬರಿ 21 ದಿನಗಳ ಹುಡುಕಾಟದ ಬಳಿಕ ಭಾರತೀಯ ನೌಕಾದಳ ಪಿಎನ್​​ಎಸ್ ಸಾದ್​ ಸಬ್​ಮೆರಿನ್​ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿತ್ತು. ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿ ಪಿಎನ್​ಎಸ್ ಸಾದ್ ಸಬ್​ಮೆರಿನ್ ಅನ್ನು ಅಡಗಿಸಿಟ್ಟಿತ್ತು. ಉಭಯ ದೇಶಗಳ ನಡುವೆ ಯುದ್ಧದ ಸಾಧ್ಯತೆಯಿಂದ ಪಿಎನ್​ಎಸ್ ಸಾದ್​ ಸಬ್​ಮೆರಿನ್ ಅನ್ನು ದಾಳಿಗೆ ಸಿದ್ಧವಾಗಿಸಿ ನಿಯೋಜನೆ ಮಾಡಿತ್ತು ಎನ್ನುವುದು ಈಗ ಬಹಿರಂಗವಾಗಿದೆ.

Intro:Body:

ವಾಯುದಾಳಿಯ ಬಳಿಕ ಪಾಕಿಸ್ತಾನದಿಂದ ಕಣ್ಣಮುಚ್ಚಾಲೆ ಆಟ... ಇದು 21 ದಿನದ ಸಬ್​ಮೆರಿನ್ ಹುಡುಕಾಟದ ರೋಚಕ ಕಹಾನಿ

ನವದೆಹಲಿ: ಪುಲ್ವಾಮಾ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ನಡೆಸಿದ್ದ ಏರ್​ಸ್ಟ್ರೈಕ್ ಬಳಿಕ ಭಾರತೀಯ ನೌಕಾಸೇನೆ ಸುಮಾರು ಮೂರು ವಾರಗಳ ಕಾಲ ಪಾಕಿಸ್ತಾನ ಸಬ್​ಮೆರಿನ್ ಒಂದನ್ನು ಸತತ ಹುಡುಕಾಟ ನಡೆಸಿತ್ತು ಅಚ್ಚರಿಯ ವಿಚಾರ ಇದೀಗ ಹೊರಬಿದ್ದಿದೆ.

ಪುಲ್ವಾಮಾ ಭಯೋತ್ಪಾದಕ ಕೃತ್ಯದ ನಂತರ ಪಾಕಿಸ್ತಾನದ ಮಿಲಿಟರಿ ಚಲನವಲನದ ಮೇಲೆ ತೀವ್ರ ನಿಗಾ ಇಟ್ಟಿತ್ತು. ಆದರೆ ಬಾಲಾಕೋಟ್ ವಾಯುದಾಳಿಯ ಬಳಿಕ ಪಾಕಿಸ್ತಾನದ ಹೊಂದಿದ್ದ ಅಗೋಸ್ತಾ ಕ್ಲಾಸ್​ನ ಪಿಎನ್​ಎಸ್​ ಸಾದ್​​ ಎನ್ನುವ ಅತ್ಯಾಧುನಿಕ ಸಬ್​ಮೆರಿನ್​  ತನ್ನ ಕಾರ್ಯಕ್ಷೇತ್ರದಿಂದ ನಾಪತ್ತೆಯಾಗಿತ್ತು ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ಪಿಎನ್​ಎಸ್ ಸಾದ್ ಏರ್​ ಇಂಡಿಪೆಂಡೆಂಟ್ ಪ್ರೊಪಲ್ಶನ್​ ಎನ್ನುವ ತಂತ್ರಜ್ಞಾನ ಹೊಂದಿದ್ದು, ಈ ಮೂಲಕ ಸಾಮಾನ್ಯ ಸಬ್​​ಮೆರಿನ್​​ಗಿಂತ ಹೆಚ್ಚು ಅವಧಿಗೆ ನೀರಿನ ಒಳಭಾಗದಲ್ಲಿ ತಟಸ್ಥವಾಗಿರಬಲ್ಲದು. ಈ ವಿಚಾರ ತಿಳಿದಿದ್ದ ಭಾರತ ಈ ಸಬ್​ಮೆರಿನ್​​ಗಾಗಿ ಭಾರಿ ಹುಡುಕಾಟ ನಡೆಸಿತ್ತು.

ಕರಾಚಿ ಸಮೀಪದಿಂದ ಪಿಎನ್​ಎಸ್​ ಸಾದ್ ಕಣ್ಮರೆಯಾಗಿತ್ತು. ಈ ಸಬ್​ಮೆರಿನ್ ಗುಜರಾತನ್ನು ಐದು ದಿನದಲ್ಲಿ, ಮುಂಬೈ ಅನ್ನು ಐದು ದಿನದಲ್ಲಿ ತಲುಪುವ ಸಾಮರ್ಥ್ಯ ಹೊಂದಿತ್ತು. ಇದು ನಿಜಕ್ಕೂ ಭಾರತದ ಭದ್ರತೆಗೆ ಅತಿದೊಡ್ಡ ಸವಾಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪಿಎನ್​ಎಸ್ ಸಾದ್ ಹುಡುಕಾಟಕ್ಕೆ ಆಧುನಿಕ  ಆ್ಯಂಟಿ ಸಬ್​ಮೆರಿನ್​​ ಹಾಗೂ ವಿಮಾನಗಳನ್ನು ಬಳಸಿ ಭಾರತ ದೊಡ್ಡ ಮಟ್ಟದಲ್ಲಿ ಹುಡುಕಾಟ ನಡೆಸಿತ್ತು.

ಕರಾಚಿಯನ್ನು ಮೂಲವಾಗಿರಿಸಿ ಪಿಎನ್​ಎಸ್​ ಒಂದು ಅವಧಿಯಲ್ಲಿ ತಲುಪಬಹುದಾದ ಎಲ್ಲ ಸ್ಥಳಗಳನ್ನು ಅಂತಿಮಗೊಳಿಸಿ ದೊಡ್ಡ ಕಾರ್ಯಾಚರಣೆ ಮಾಡಲಾಯಿತು. ಗುಜರಾಜ್​, ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯಗಳ ಕರಾವಳಿ ಭಾಗದಲ್ಲಿ ಹುಡುಕಾಟ ನಡೆಸಲಾಯಿತು. ಒಂದು ವೇಳೆ ಪಿಎನ್​ಎಸ್ ಸಾದ್ ಭಾರತದ ಜಲಮಾರ್ಗವನ್ನು ಪ್ರವೇಶಿಸಿದ್ದರೆ ವಹಿಸಬೇಕಾದ ಎಲ್ಲ ರೀತಿಯ ಮುಂಜಾಗ್ರತೆಯನ್ನು ಮಾಡಿಕೊಂಡೇ ಹುಡುಕಾಟ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ನ್ಯೂಕ್ಲಿಯರ್ ಸಬ್​ಮೆರಿನ್​ ಐಎನ್​ಎಸ್​ ಚಕ್ರ ಹಾಗೂ ಐಎನ್​ಎಸ್ ಕಲ್ವಾರಿಯನ್ನು ಕಾರ್ಯಾಚರಣೆಗೆ ಇಳಿಸಿ ಭಾರತೀಯ ನೌಕಾದಳ ಪಾಕಿಸ್ತಾನದಿಂದ ಎದುರಾಬಹುದಾದ ಎಲ್ಲ ದಾಳಿಗೂ ಸಾಕಷ್ಟು ಎಚ್ಚರ ವಹಿಸಿತ್ತು. ದಿನದಿಂದ ದಿನಕ್ಕೆ ಹುಡುಕಾಟವನ್ನು ಮತ್ತಷ್ಟು ಚುರುಕುಗೊಳಿಸಿ ಸ್ಯಾಟಲೈಟ್ ಸಹಾಯವನ್ನೂ ಪಡೆಯಲಾಗಿತ್ತು.

ಬರೋಬ್ಬರಿ 21 ದಿನಗಳ ಹುಡುಕಾಟದ ಬಳಿಕ ಭಾರತೀಯ ನೌಕಾದಳ ಪಿಎನ್​​ಎಸ್ ಸಾದ್​ ಸಬ್​ಮೆರಿನ್​ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿತ್ತು. ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿ ಪಿಎನ್​ಎಸ್ ಸಾದ್ ಸಬ್​ಮೆರಿನ್ ಅನ್ನು ಅಡಗಿಸಿಟ್ಟಿತ್ತು. ಉಭಯ ದೇಶಗಳ ನಡುವೆ ಯುದ್ಧದ ಸಾಧ್ಯತೆಯಿಂದ ಪಿಎನ್​ಎಸ್ ಸಾದ್​ ಸಬ್​ಮೆರಿನ್ ಅನ್ನು ದಾಳಿಗೆ ಸಿದ್ಧವಾಗಿಸಿ ನಿಯೋಜನೆ ಮಾಡಿತ್ತು ಎನ್ನುವುದು ಈಗ ಬಹಿರಂಗವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.