ಪಿಥೋರಘರ್ (ಉತ್ತರಾಖಂಡ): ಭಾರೀ ಮಳೆಯ ಹಿನ್ನೆಲೆ ಉತ್ತರಾಖಂಡದ ಪಿಥೋರಘರ್ ಜಿಲ್ಲೆಯಲ್ಲಿ ಗೋಸಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಒಂದು ಭಾಗ ಕುಸಿದಿದೆ.
ರಾತ್ರಿಯಿಡೀ ಭಾರೀ ಮಳೆ ಸುರಿದ ಹಿನ್ನೆಲೆ ಪಿಥೋರಘಡ್ ಮತ್ತು ಬಂಗಪಾನಿ ತಹಸಿಲ್ನಲ್ಲಿರುವ ಸೇತುವೆಯ ಒಂದು ಭಾಗ ಇಂದು ಬೆಳಗ್ಗೆ ಕುಸಿದಿದೆ ಎಂದು ತಿಳಿದು ಬಂದಿದೆ.
ಪರಿಣಾಮವಾಗಿ ಮಾರ್ಗದಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ನಿನ್ನೆ ಪಿಥೋರಘರ್ ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಧಾರಾಕಾರ ಮಳೆಯಿಂದಾಗಿ ಮನೆಗಳ ಮೇಲೆ ಕಲ್ಲು ಮಣ್ಣು ಕುಸಿದ ಕಾರಣ ಮೂವರು ಮೃತಪಟ್ಟಿದ್ದರು.